ADVERTISEMENT

ಎಸ್‌ಎಸ್‌ಸಿಯಿಂದ ಕನ್ನಡಿಗರಿಗೆ ವಂಚನೆ‘

​ಪ್ರಜಾವಾಣಿ ವಾರ್ತೆ
Published 15 ಜನವರಿ 2021, 20:23 IST
Last Updated 15 ಜನವರಿ 2021, 20:23 IST

ಬೆಂಗಳೂರು: ಕೇಂದ್ರ ಸಿಬ್ಬಂದಿ ಆಯ್ಕೆ ಸಮಿತಿಯು (ಎಸ್‌ಎಸ್‌ಸಿ) ತರಾತುರಿಯಲ್ಲಿ ನೇಮಕ ಆದೇಶ ಹೊರಡಿಸಿದ್ದು, ಕನ್ನಡಿಗರೂ ಸೇರಿದಂತೆ ಹಿಂದಿಯೇತರ ಭಾಷೆಗಳ ಅಭ್ಯರ್ಥಿಗಳನ್ನುಉದ್ಯೋಗ ವಂಚಿತರನ್ನಾಗಿಸುವ ಹುನ್ನಾರ ಮಾಡಿದೆ ಎಂದು ಕನ್ನಡ ಗೆಳೆಯರ ಬಳಗ ಆರೋಪಿಸಿದೆ.

‘ರಾಷ್ಟ್ರೀಯ ನೇಮಕಾತಿ ಸಂಸ್ಥೆಯು (ಎನ್‌ಆರ್‌ಎ) ವಿವಿಧ ಖಾಲಿ ಹುದ್ದೆಗಳಿಗೆ ಮೇ ತಿಂಗಳಲ್ಲಿ ಸಿಇಟಿ ಪರೀಕ್ಷೆ ನಡೆಸುವುದಾಗಿ ಪ್ರಕಟಣೆ ಹೊರಡಿಸಿದೆ ಹಾಗೂಸಾಮಾನ್ಯ ಅರ್ಹತಾ ಪರೀಕ್ಷೆಯನ್ನು ಹಿಂದಿ, ಇಂಗ್ಲಿಷ್‍ಗಳ ಜೊತೆಗೆ 12 ರಾಜ್ಯ ಭಾಷೆಗಳಲ್ಲೂ ನಡೆಸಲಾಗುವುದು ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಪ್ರಕಟಿಸಿದ ಬೆನ್ನಲ್ಲೇ, ಎಸ್‌ಎಸ್‌ಸಿ ಕೂಡ ತರಾತುರಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ’.

‘ಸಹಾಯಕ ಲೆಕ್ಕಪರಿಶೋಧನಾ ಅಧಿಕಾರಿ, ಸಹಾಯಕ ಲೆಕ್ಕಾಧಿಕಾರಿ, ಸಹಾಯಕ ಶಾಖಾಧಿಕಾರಿ, ಕಿರಿಯ ಸಾಂಖ್ಯಿಕ, ಸಹಾಯಕ ಲೆಕ್ಕಾಧಿಕಾರಿ, ಆದಾಯ ತೆರಿಗೆ, ಕೇಂದ್ರ ಅಬಕಾರಿ, ಸಿಬಿಐ, ಎನ್‌ಸಿಬಿ ಸೇರಿದಂತೆ 6,506 ಹುದ್ದೆಗಳಿಗೆ ಜಾಹೀರಾತು ನೀಡಿ, ಜ.31ರೊಳಗೆ ಅರ್ಜಿ ಸಲ್ಲಿಸಲು ತಿಳಿಸಿದೆ.ಇದು ಹಲವು ಅನುಮಾನಗಳಿಗೆ ಎಡೆಮಾಡಿದ್ದು, ಹಿಂದಿ ಭಾಷಿಕರಿಗೆ ಅನುಕೂಲ ಮಾಡಿಕೊಡಲು ಮತ್ತು ಹಿಂದಿಯೇತರ ಅಭ್ಯರ್ಥಿಗಳನ್ನು ಅವಕಾಶ ವಂಚಿತರಾಗಿಸುವ ಸಂಚಿದು’ ಎಂದು ಬಳಗದ ಸಂಚಾಲಕ ರಾ.ನಂ.ಚಂದ್ರಶೇಖರ್ ತಿಳಿಸಿದ್ದಾರೆ.

ADVERTISEMENT

‘ಎಸ್‌ಎಸ್‌ಸಿಯ ಉದ್ದೇಶಿತ ಆಯ್ಕೆ ಪ್ರಕ್ರಿಯೆ ತಡೆಹಿಡಿದು, ‘ರಾಷ್ಟ್ರೀಯ ನೇಮಕಾತಿ ಸಂಸ್ಥೆ’ಯ ಮೂಲಕ ಪರೀಕ್ಷೆ ನಡೆಸುವಂತೆ ಕೇಂದ್ರ ಸರ್ಕಾರವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಬೇಕು. ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಇಂತಹ ವಿಚಾರಗಳತ್ತ ಗಮನ ನೀಡಬೇಕು’ ಎಂದೂ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.