ADVERTISEMENT

ಎಸ್ಸೆಸ್ಸೆಲ್ಸಿ ಉತ್ತರ ಪತ್ರಿಕೆ ಅದಲು-ಬದಲು, ನೋಂದಣಿ ಸಂಖ್ಯೆ ತಿದ್ದುಪಡಿ!

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2020, 21:23 IST
Last Updated 20 ಆಗಸ್ಟ್ 2020, 21:23 IST
ವಿದ್ಯಾರ್ಥಿನಿ ಅಕ್ಷತಾಳ ಉತ್ತರ ಪತ್ರಿಕೆಯಲ್ಲಿ ನೋಂದಣಿ ಸಂಖ್ಯೆ ತಿದ್ದಿರುವುದು
ವಿದ್ಯಾರ್ಥಿನಿ ಅಕ್ಷತಾಳ ಉತ್ತರ ಪತ್ರಿಕೆಯಲ್ಲಿ ನೋಂದಣಿ ಸಂಖ್ಯೆ ತಿದ್ದಿರುವುದು   

ತ್ಯಾವಣಿಗೆ (ದಾವಣಗೆರೆ ಜಿಲ್ಲೆ): ಮೌಲ್ಯಮಾಪನದ ವೇಳೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಉತ್ತರ ಪತ್ರಿಕೆ ಅದಲು ಬದಲು ಮಾಡಿ, ನೋಂದಣಿ ಸಂಖ್ಯೆಯನ್ನೂ ತಿದ್ದುಪಡಿ ಮಾಡಿರುವ ಪ್ರಕರಣ ನಡೆದಿದೆ.

ಸಮೀಪದ ಬೆಳಲಗೆರೆ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಅಕ್ಷತಾ ಕೆ.ಎಚ್‌,ಎಸ್ಸೆಸ್ಸೆಲ್ಸಿ ಪರೀಕ್ಷೆಯ ಉಳಿದ ವಿಷಯಗಳಲ್ಲಿ ಉತ್ತಮ ಅಂಕ ಪಡೆದಿದ್ದರೂ ಸಮಾಜ ವಿಜ್ಞಾನದಲ್ಲಿ 14 ಅಂಕ ಬಂದಿದ್ದರಿಂದ ಅನುತ್ತೀರ್ಣಳಾಗಿದ್ದಾಳೆ.

‘ಪುತ್ರಿಗೆ ಕನ್ನಡದಲ್ಲಿ 120, ಇಂಗ್ಲಿಷ್‌ನಲ್ಲಿ 55, ಹಿಂದಿ–91, ಗಣಿತ–62, ವಿಜ್ಞಾನದಲ್ಲಿ 50 ಅಂಕ ಬಂದಿವೆ. ಸಮಾಜ ವಿಜ್ಞಾನದಲ್ಲಿ 14 ಅಂಕ ಬಂದಿತ್ತು. ಶಂಕೆಯಿಂದ ಉತ್ತರ ಪತ್ರಿಕೆ ನಕಲು ಪ್ರತಿಗೆ ಅರ್ಜಿ ಹಾಕಿದ್ದೆವು. ನಕಲು ಪ್ರತಿ ನೋಡಿದ್ದರಿಂದಲೋಪ ಗೊತ್ತಾಗಿದೆ. ಫಲಿತಾಂಶ ನೋಡಿ ಮಗಳು ಖಿನ್ನತೆಗೆ ಒಳಗಾಗಿದ್ದಾಳೆ. ಶಿಕ್ಷಣ ಸಚಿವರು ನ್ಯಾಯ ದೊರಕಿಸಿಕೊಡಬೇಕು'ಎಂದು ಅಕ್ಷತಾಳ ತಂದೆ ಹನುಮಂತಪ್ಪ ಬೇಸರ ವ್ಯಕ್ತಪಡಿಸಿದರು.

ADVERTISEMENT

‘ನೋಂದಣಿ ಸಂಖ್ಯೆ ತಿದ್ದಿರುವುದು ನಕಲು ಪ್ರತಿಯಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ. ಉತ್ತರ ಪತ್ರಿಕೆಯೇ ನನ್ನದಲ್ಲ. ಸಮಾಜ ವಿಜ್ಞಾನದಲ್ಲಿ 80 ಅಂಕ ಬರಬೇಕಿತ್ತು’ ಎಂದು ಅಕ್ಷತಾ ಅಳಲು ತೋಡಿಕೊಂಡಳು.

ಅಕ್ಷತಾ ಅವರ ಉತ್ತರ ಪತ್ರಿಕೆ ನೋಂದಣಿ ಸಂಖ್ಯೆ ತಿದ್ದುಪಡಿ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಮುಖ್ಯ ಶಿಕ್ಷಕಕಮಲಾಕ್ಷ ಸದಾಶಿವ ಶೇಟ್ ಪ್ರತಿಕ್ರಿಯಿಸಿದರು.

*

ವಿದ್ಯಾರ್ಥಿನಿಯ ಉತ್ತರ ಪತ್ರಿಕೆ ಬದಲಾಗಿರುವ ಬಗ್ಗೆ ಪರಿಶೀಲಿಸಲು ಈಗಾಗಲೇ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಗೆ ಕಳುಹಿಸಲಾಗಿದೆ.
-ಮಂಜುನಾಥ್,ಕ್ಷೇತ್ರ ಶಿಕ್ಷಣಾಧಿಕಾರಿ, ಚನ್ನಗಿರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.