ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆ: 2ನೇ ದಿನವೂ ಸುಗಮ

ಶೇ 96.59ರಷ್ಟು ಹಾಜರಾತಿ: ನಾಳೆ ಗಣಿತ–ವ್ಯಾಪಕ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2020, 18:04 IST
Last Updated 26 ಜೂನ್ 2020, 18:04 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಎಸ್ಸೆಸ್ಸೆಲ್ಸಿ ಪರೀಕ್ಷೆಯ ಎರಡನೇ ದಿನವಾದ ಶುಕ್ರವಾರ ಸಹ ವ್ಯವಸ್ಥಿತವಾಗಿ ಪರೀಕ್ಷೆ ನಡೆದಿದ್ದು, ಜಿಟಿಎಸ್ ಮತ್ತು ಅರ್ಥಶಾಸ್ತ್ರ ವಿಷಯದ ಪರೀಕ್ಷೆಗಳಿಗೆ 528 ಮಂದಿಯ ಪೈಕಿ 510 ಮಂದಿ (ಶೇ 96.59) ಹಾಜರಾಗಿದ್ದಾರೆ.

‘94 ಪರೀಕ್ಷಾ ಕೇಂದ್ರಗಳಲ್ಲಷ್ಟೇ ಈ ಪರೀಕ್ಷೆ ನಡೆಯಿತು.18 ಮಂದಿ ಗೈರು ಹಾಜರಾಗಿದ್ದಾರೆ. ಕಳೆದ ವರ್ಷ 7 ಮಂದಿ ಗೈರಾಗಿದ್ದರು. ಎಲ್ಲಿಯೂ ನಕಲು ನಡೆದ ವರದಿಯಾಗಿಲ್ಲ. ಕಂಟೈನ್ಮೆಂಟ್ ವಲಯಕ್ಕೆ ಸೇರಿದ ಯಾವುದೇ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿಲ್ಲ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಶನಿವಾರ ಗಣಿತ ಪರೀಕ್ಷೆ ನಡೆಯಲಿದ್ದು, ಪರೀಕ್ಷಾ ಕೇಂದ್ರಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಅಂತರ ಪಾಲಿಸುವ ಮೂಲಕ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಡೆಯುತ್ತಿರುವ ಪರೀಕ್ಷೆಯ ಯಶಸ್ಸಿಗೆ ಪೋಷಕರು ಹೆಚ್ಚಿನ ಸಹಕಾರ ನೀಡಬೇಕು’ ಎಂದು ಸಚಿವರು ಕೋರಿದ್ದಾರೆ.

ADVERTISEMENT

ವಿಮೆಗೆ ಒತ್ತಾಯ

‘ಪರೀಕ್ಷಾ ಕಾರ್ಯದಲ್ಲಿ 60 ಸಾವಿರಕ್ಕೂ ಅಧಿಕ ಪ್ರೌಢಶಾಲಾ ಶಿಕ್ಷಕರು ಮತ್ತು ಇಲಾಖೆಯ ಇತರ ಸಿಬ್ಬಂದಿ ತೊಡಗಿದ್ದು, ಕೊರೊನಾ ಸೋಂಕಿನ ಭೀತಿ ಇವರಿಗೂ ಇದೆ. ಹೀಗಾಗಿ ಪರೀಕ್ಷೆ ಹಾಗೂ ಮುಂದೆ ಮೌಲ್ಯಮಾಪನ ಕೆಲಸದಲ್ಲಿ ತೊಡಗಲಿರುವ ಎಲ್ಲ ಸಿಬ್ಬಂದಿಗೆ ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಡಿಯಲ್ಲಿ ₹ 1 ಕೋಟಿಯ ವಿಮೆಗೆ ಒಳಪ‍ಡಿಸುವುದು ಹಾಗೂ ಸೋಂಕು ತಗುಲಿದರೆ ಸುಸಜ್ಜಿತ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆಗೆ ಕ್ರಮ ಕೈಗೊಳ್ಳಬೇಕು’ ಎಂದು ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಕೆ.ಮಂಜುನಾಥ್ ಒತ್ತಾಯಿಸಿದ್ದಾರೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.