ADVERTISEMENT

ವಲಸಿಗರ ಮಕ್ಕಳಿಗೆ ಅವರಿದ್ದಲ್ಲೇ ಪರೀಕ್ಷೆಗೆ ಅವಕಾಶ?

ಪ್ರತಿ ಕೇಂದ್ರದಲ್ಲೂ ವಿಶ್ರಾಂತಿ ಕೊಠಡಿ

​ಪ್ರಜಾವಾಣಿ ವಾರ್ತೆ
Published 16 ಮೇ 2020, 20:15 IST
Last Updated 16 ಮೇ 2020, 20:15 IST
ವಿದ್ಯಾರ್ಥಿಗಳ ಪ್ರಾತಿನಿಧಿಕ ಚಿತ್ರ
ವಿದ್ಯಾರ್ಥಿಗಳ ಪ್ರಾತಿನಿಧಿಕ ಚಿತ್ರ    

ಕಲಬುರ್ಗಿ, ಬೆಂಗಳೂರು: ರಾಜ್ಯದ ವಿವಿಧ ವಲಸೆ ಸ್ಥಳಗಳಿಂದ ತಮ್ಮ ಊರುಗಳಿಗೆ ಮರಳಿರುವ ಮಕ್ಕಳಿಗೆ ಈಗ ಇರುವ ಪ್ರದೇಶದಲ್ಲಿಯೇ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವ ಸಾಧ್ಯತೆ ಕುರಿತು ಚಿಂತನೆ ನಡೆದಿದೆ.

ಎಸ್ಸೆಸ್ಸೆಲ್ಸಿ ಮಕ್ಕಳ ಕುರಿತು ಮಾಹಿತಿ ಕಲೆಹಾಕುವಂತೆ ಡಿಡಿಪಿಐಗಳಿಗೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶನ ನೀಡಿದೆ.

‘ಲಾಕ್‌ಡೌನ್‌ ಕಾರಣ ಮೂಲ ನೆಲೆಗೆ ಮರಳಿರುವ ವಲಸೆ ಕಾರ್ಮಿಕರ ಮಕ್ಕಳು ಪರೀಕ್ಷೆಗಾಗಿ ಅವರು ಕಲಿಯುತ್ತಿದ್ದ ಊರುಗಳಿಗೆ ಧಾವಿಸುವುದನ್ನು ತಪ್ಪಿಸಬೇಕಿದೆ. ಇಂಥ ವಿದ್ಯಾರ್ಥಿಗಳು ಬಯಸಿದ ಕೇಂದ್ರದಲ್ಲೇ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡ
ಬಹುದು’ ಎಂದೂ ಮಂಡಳಿಯು ಅಭಿಪ್ರಾಯಪಟ್ಟಿದೆ.

ADVERTISEMENT

ದ್ವಿತೀಯ ಪಿಯು ವಿದ್ಯಾರ್ಥಿ ಗಳಿಗೂ ತಾವು ಇರುವ ಸ್ಥಳಕ್ಕೆ ಸಮೀಪದ ಪರೀಕ್ಷಾ ಕೇಂದ್ರದಲ್ಲೇ ಇಂಗ್ಲಿಷ್‌ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವ ಸಾಧ್ಯತೆ ಇದೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.