ಪಾಲಕರು ಮಕ್ಕಳ ಮೇಲೆ ಒತ್ತಡ ಹಾಕಬಾರದು, ಮಕ್ಕಳ ಆರೋಗ್ಯದ ಕಡೆ ಗಮನಹರಿಸಬೇಕು ಹಾಗೂ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಿಸಿದರೆ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯಬಹುದು.
ಲಹರಿ, ದೊಡ್ಡಬಳ್ಳಾಪುರ
ಪ್ರಶ್ನೆ: ಪ್ರಶ್ನೆಗಳು ಯಾವ ರೀತಿ ಬರುತ್ತವೆ?
ತಜ್ಞರ ಉತ್ತರ: ಪ್ರಬಂಧದ ಪ್ರಶ್ನೆಗಳಿಗೆ ಬರೆಯುವ ಮೂಲಕ ಅಭ್ಯಾಸ ಮಾಡಿಕೊಳ್ಳಿ. ಪ್ರಶ್ನೆಗಳ ಬಗ್ಗೆ ನಿಮ್ಮ ತರಗತಿ ಶಿಕ್ಷಕರನ್ನು ಕೇಳಿ?
ರಾಘವೇಂದ್ರ ವಕ್ರಿ, ಸುರಪುರ
ಪ್ರಶ್ನೆ: ಕೊಠಡಿಗಳಲ್ಲಿ ಸಿಸಿ ಕ್ಯಾಮೆರಾ ಇರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆಯೇ?
ತಜ್ಞರ ಉತ್ತರ: ಇದರಿಂದ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ನಮ್ಮ ಮನೆಗಳಲ್ಲಿ ಸಿಸಿ ಕ್ಯಾಮೆರಾ ಇರುವಂತೆ ಇಲ್ಲಿಯೂ ಕ್ಯಾಮೆರಾಗಳು ಇರಲಿವೆ. ಅದರಿಂದ ಏನು ತೊಂದರೆ ಆಗುವುದಿಲ್ಲ.
ಪ್ರಶ್ನೆ: ಮಗಳು ಚೆನ್ನಾಗಿ ಓದುತ್ತಾಳೆ, ಆದರೆ ಪರೀಕ್ಷೆ ಸಮಯದಲ್ಲಿ ಎಲ್ಲಾ ಮರೆತು ಹೋಗುತ್ತಾಳೆ. ಇದಕ್ಕೆ ಏನು ಮಾಡುವುದು?
ತಜ್ಞರ ಉತ್ತರ: ಮಕ್ಕಳಿಗೆ ಮೊದಲು ಪೋಷಕರ ಒತ್ತಡ ಹಾಕಬಾರದು. ಈಗಾಗಲೇ ಬ್ಲ್ಯೂಪಿಂಟ್, ಮಾದರಿ ಪ್ರಶ್ನೆಗಳನ್ನು ಕೊಡಲಾಗಿದೆ. ಅದರಂತೆ ಅಭ್ಯಾಸ ಮಾಡಲು ಹೇಳಿ.
ಲಹರಿ, ದೊಡ್ಡಬಳ್ಳಾಪುರ
ಪ್ರಶ್ನೆ: ಪ್ರಶ್ನೆಗಳು ಯಾವ ರೀತಿ ಬರುತ್ತವೆ?
ತಜ್ಞರ ಉತ್ತರ: ಪ್ರಬಂಧದ ಪ್ರಶ್ನೆಗಳಿಗೆ ಬರೆಯುವ ಮೂಲಕ ಅಭ್ಯಾಸ ಮಾಡಿಕೊಳ್ಳಿ. ಪ್ರಶ್ನೆಗಳ ಬಗ್ಗೆ ನಿಮ್ಮ ತರಗತಿ ಶಿಕ್ಷಕರನ್ನು ಕೇಳಿ?
ಕುಲಕರ್ಣಿ, ಯಾದಗಿರಿ
ಪ್ರಶ್ನೆ: ಮಕ್ಕಳ ಆತ್ಮವಿಶ್ವಾಸ ಹೆಚ್ಚಿಸಲು ಏನು ಮಾಡಬೇಕು?
ತಜ್ಞರ ಉತ್ತರ: ಮಕ್ಕಳಿಗೆ ಒತ್ತಡ ಹಾಕಬಾರದು, ಓದಿನ ಬಗ್ಗೆ ಗಮನಹರಿಸಲು ಹೇಳಿದರೆ ಸಾಕು.
ಚೇತನ ಅಂಗಡಿ, ಹುಬ್ಬಳ್ಳಿ
ಪ್ರಶ್ನೆ: ಪಠ್ಯದಲ್ಲಿನ ಎಲ್ಲಾ ವಿಷಯಗಳನ್ನು ಅಭ್ಯಾಸ ಮಾಡಬೇಕೇ?
ತಜ್ಞರ ಉತ್ತರ: ಈಗಾಗಲೇ ನಾವು ವಿದ್ಯಾರ್ಥಿಗಳಿಗೆ ಬ್ಲ್ಯೂಪ್ರಿಂಟ್, ಮಾದರಿ ಪ್ರಶ್ನೆಗಳನ್ನು ಕೊಡಲಾಗಿದೆ. ಅದರಂತೆ ಅಭ್ಯಾಸ ಮಾಡಬೇಕು
ಮಾಲಿನಿ ( ವಿದ್ಯಾರ್ಥಿನಿ), ಧಾರವಾಡ
ಪ್ರಶ್ನೆ: ಸಮಾಜ ವಿಷಯದ ಬ್ಲ್ಯೂಪ್ರಿಂಟ್ ಪರೀಕ್ಷೆ ಬಗ್ಗೆ ಗೊಂದಲವಿದೆ.
ತಜ್ಞರ ಉತ್ತರ: ಈಗಾಲೇ ಪರೀಕ್ಷೆ ಬರೆದು ಅಭ್ಯಾಸ ಮಾಡಿಕೊಂಡಿದ್ದೀರಿ. ಶಿಕ್ಷಕರನ್ನು ಕೇಳಿ, ಗೊಂದಲ ಪರಿಹರಿಸಿಕೊಳ್ಳಿ
ಪ್ರಶ್ನೆ: ಪಠ್ಯವನ್ನು ನೆನಪಿಟ್ಟುಕೊಳ್ಳುದು ಹೇಗೆ?
ತಜ್ಞರ ಉತ್ತರ: ಪೂರ್ವ ಸಿದ್ಧತೆ ಪರೀಕ್ಷೆ ಮಾದರಿಯಲ್ಲಿ, ಭಯ ಪಡೆದೇ ಪರೀಕ್ಷೆ ಬರೆಯಬೇಕು
ಪ್ರಶ್ನೆ: ಮಕ್ಕಳು ಗಾಬರಿ ಇಲ್ಲದೇ ಪರೀಕ್ಷೆ ಬರೆಯಬಹುದೇ?
ತಜ್ಞರ ಉತ್ತರ: ಖಂಡಿತವಾಗಿ ಬರಯಬಹುದು, ಮಕ್ಕಳಿಗೆ ಒತ್ತಡ ಹಾಕಬಾರದು
ಪ್ರಶ್ನೆ: ಮಾಡೆಲ್ ಪ್ರಶ್ನೆಪತ್ರಿಕೆಗಳಿಂದ ಪ್ರಶ್ನೆಗಳು ಬರಬಹುದೇ?
ತಜ್ಞರ ಉತ್ತರ: ಶೇ. 80 ರಷ್ಟು ಬರಬಹುದು
ಪ್ರಶ್ನೆ: ಪರೀಕ್ಷೆ ಕೇಂದ್ರಕ್ಕೆ ಏನು ತೆಗೆದುಕೊಂಡು ಹೋಗಬೇಕು?
ತಜ್ಞರ ಉತ್ತರ: ಆಡ್ಮಿಶನ್ ಟಿಕೆಟ್ ಮತ್ತು ಪೆನ್ನುಗಳು ಇದ್ದರೆ ಸಾಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.