ADVERTISEMENT

ಎಸ್ಎಸ್‌ಎಲ್‌ಸಿ ಫಲಿತಾಂಶ | 6 ವಿದ್ಯಾರ್ಥಿಗಳಿಂದ ಶೇ.100 ಅಂಕ ಸಾಧನೆ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2020, 8:38 IST
Last Updated 11 ಆಗಸ್ಟ್ 2020, 8:38 IST
ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ತನ್ಮಯಿಗೆ ಅಪ್ಪ ಐ.ಎಸ್.ಪ್ರಸನ್ನ ಮತ್ತು ಅಮ್ಮ ಡಿ.ಎಲ್.ಸಂಧ್ಯಾ ಸಿಹಿ ತಿನಿಸಿದರು.
ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ತನ್ಮಯಿಗೆ ಅಪ್ಪ ಐ.ಎಸ್.ಪ್ರಸನ್ನ ಮತ್ತು ಅಮ್ಮ ಡಿ.ಎಲ್.ಸಂಧ್ಯಾ ಸಿಹಿ ತಿನಿಸಿದರು.   

ಬೆಂಗಳೂರು:2019–20ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ಆರು ವಿದ್ಯಾರ್ಥಿಗಳು ಶೇ.100 ಅಂಕ ಸಾಧನೆ ಮಾಡಿದ್ದಾರೆ.

ಒಟ್ಟು8.11 ಲಕ್ಷ ವಿದ್ಯಾರ್ಥಿಗಳುಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ5,82,316 ಮಂದಿ ಉತ್ತೀರ್ಣರಾಗಿದ್ದು, 2,28,734 ಅನುತ್ತೀರ್ಣರಾಗಿದ್ದಾರೆ. ಹೀಗಾಗಿ ಈ ಸಾಲಿನಲ್ಲಿ ಶೇ.71.80 ವಿದ್ಯಾರ್ಥಿಗಳು ಉತ್ತೀರ್ಣರಾದಂತಾಗಿದೆ. ಕಳೆದ ಸಾಲಿನಲ್ಲಿಶೇ 73.70 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು.ಶೇ. 66.41ಬಾಲಕರು ಮತ್ತುಶೇ.77.74ಬಾಲಕಿಯರು ಉತ್ತೀರ್ಣರಾಗಿದ್ದಾರೆ.

kseeb.kar.nic.in,karresults.nic.inಮತ್ತುresults.nic.inವೆಬ್‌ಸೈಟ್‌ಗಳಲ್ಲಿ ಫಲಿತಾಂಶ ಲಭ್ಯವಿದೆ.ಮಂಗಳವಾರ ಬೆಳಿಗ್ಗೆ ಆಯಾ ಶಾಲೆಗಳಲ್ಲಿ ಫಲಿತಾಂಶ ನೋಡಬಹುದು.

ADVERTISEMENT

ಶೇ. 100 ಅಂಕ ಪಡೆದ ವಿದ್ಯಾರ್ಥಿಗಳ ವಿವರ ಇಲ್ಲಿದೆ.
1. ಸನ್ನಿಧಿ ಮಹಾಬಲೇಶ್ವರ ಹೆಗಡೆ (ಸರ್ಕಾರಿ ಮಾರಿಕಾಂಬಾ ಪಿಯು ಕಾಲೇಜು, ಶಿರಸಿ)
2. ಚೈತನ್ಯ ಕೆ.ಎಸ್. (ಸೇಂಟ್ ಮೇರಿ ಹೈಸ್ಕೂಲ್, ಬೆಂಗಳೂರು)
3. ನಿಖಿಲೇಶ್ ಎಂ.ಮರಳಿ (ಪೂರ್ಣಪ್ರಜ್ಞ ಶಿಕ್ಷಣ ಕೇಂದ್ರ, ಬೆಂಗಳೂರು)
4. ಧೀರಜ್ ರೆಡ್ಡಿ ಎಂ.ಪಿ. (ಸತ್ಯಸಾಯಿ ಸರಸ್ವತಿ ಇಂಗ್ಲಿಷ್ ಮಾಧ್ಯಮ ಶಾಲೆ, ಮಂಡ್ಯ)
5. ಅನುಷ್ ಎ.ಎಲ್. (ಕುಮಾರಸ್ವಾಮಿ ಇಂಗ್ಲಿಷ್ ಮೀಡಿಯಂ ಸ್ಕೂಲ್, ಸುಳ್ಯ)
6. ತನ್ಮಯಿ ಐ.ಪಿ. (ಸೇಂಟ್ ಜೋಸೆಫ್ ಕಾನ್ವೆಂಟ್, ಚಿಕ್ಕಮಗಳೂರು)

ಅನುಷ್ ಎ.ಎಲ್. (ಕುಮಾರಸ್ವಾಮಿ ಇಂಗ್ಲಿಷ್ ಮೀಡಿಯಂ ಸ್ಕೂಲ್, ಸುಳ್ಯ)
ತನ್ಮಯಿ ಐ.ಪಿ. (ಸೇಂಟ್ ಜೋಸೆಫ್ ಕಾನ್ವೆಂಟ್, ಚಿಕ್ಕಮಗಳೂರು)

624 ಅಂಕ ಗಳಿಸಿದ11 ವಿದ್ಯಾರ್ಥಿಗಳು
ಬೆಂಗಳೂರಿನ ಜಿ.ಕೆ. ಅಮೋಘ್, ಪ್ರಣವ್‌ ವಿಜಯ್‌ ನಾಡಿಗೇರ, ಎಂ.ಡಿ. ವೀಣಾ, ನಿಹಾರಿಕಾ ಸಂತೋಷ್‌ ಕುಲಕರ್ಣಿ, ಎ.ಎಸ್. ಸ್ಫೂರ್ತಿ, ಉತ್ತರ ಕನ್ನಡದ ಅನಿರುದ್ಧ್‌ ಸುರೇಶ್‌ ಗುತ್ತೀಕರ್, ತುಮಕೂರಿನ ಜಿ.ಎಂ. ಮಹೇಶ್, ಉಡುಪಿಯ ಸುರಭಿ ಎಸ್.ಶೆಟ್ಟಿ, ದಕ್ಷಿಣ ಕನ್ನಡದ ಸುಮುಖ ಸುಬ್ರಹ್ಮಣ್ಯ ಶೆಟ್ಟಿ, ನಿಧಿ ರಾವ್, ಶಿವಮೊಗ್ಗದ ಟಿ.ಎಸ್. ಅಭಿರಾಮ 625ಕ್ಕೆ 624 ಅಂಕಗಳನ್ನು ಪಡೆದಿದ್ದಾರೆ.

ಕಳೆದ ಬಾರಿ ಇಬ್ಬರುವಿದ್ಯಾರ್ಥಿಗಳು ಶೇ.100 ಅಂಕ ಸಾಧನೆ ಮಾಡಿದ್ದರು. ಹನ್ನೊಂದು ವಿದ್ಯಾರ್ಥಿಗಳು 624 ಅಂಕಗಳನ್ನು ಪಡೆದು ಗಮನ ಸೆಳೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.