ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆ: ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2018, 19:16 IST
Last Updated 30 ಅಕ್ಟೋಬರ್ 2018, 19:16 IST

ಬೆಂಗಳೂರು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು 2019ರ ಮಾರ್ಚ್‌ 21ರಿಂದ ಏಪ್ರಿಲ್‌ 4ರವರೆಗೆ ನಡೆಸಲು, ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಿದೆ. ಆಕ್ಷೇಪಣೆ ಸಲ್ಲಿಸಲು ನ. 29ರವರೆಗೆ ಕಾಲಾವಕಾಶ ನೀಡಿದೆ.

ವೇಳಾಪಟ್ಟಿ: ಮಾರ್ಚ್‌ 21 ಪ್ರಥಮ ಭಾಷೆ, 23ರಂದು ಎಲಿಮೆಂಟ್ಸ್ ಆಫ್‌ ಮೆಕಾನಿಕಲ್‌ ಅಂಡ್‌ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌, ಎಂಜಿನಿಯರಿಂಗ್‌ ಗ್ರಾಫಿಕ್ಸ್‌, ಎಲಿಮೆಂಟ್ಸ್‌ ಆಫ್‌ ಕಂಪ್ಯೂಟರ್‌ ಸೈನ್ಸ್‌, ಅರ್ಥಶಾಸ್ತ್ರ, 25ರಂದು ಗಣಿತ, ಸಮಾಜಶಾಸ್ತ್ರ, 27ರಂದು ದ್ವಿತೀಯ ಭಾಷೆ, 29ರಂದು ವಿಜ್ಞಾನ, ಏಪ್ರಿಲ್‌ 2 ಸಮಾಜ ವಿಜ್ಞಾನ, ರಾಜ್ಯಶಾಸ್ತ್ರ, ಕರ್ನಾಟಕ ಸಂಗೀತ/ಹಿಂದೂಸ್ತಾನಿ ಸಂಗೀತ, 4ರಂದು ತೃತೀಯ ಭಾಷೆ.

ಪ್ರಥಮ ಪಿ.ಯು.ಸಿ ವಾರ್ಷಿಕ ಪರೀಕ್ಷೆ ವೇಳಾಪಟ್ಟಿ: 2018–19ನೇ ಸಾಲಿನ ಪ್ರಥಮ ಪಿ.ಯು. ವಾರ್ಷಿಕ ಪರೀಕ್ಷೆಯನ್ನು ಜನವರಿ 31ರಿಂದ ಫೆಬ್ರುವರಿ 9ರ ವರೆಗೆ ನಡೆಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ವೇಳಾಪಟ್ಟಿ ಪ್ರಕಟಿಸಿದೆ.

ADVERTISEMENT

ವೇಳಾಪಟ್ಟಿ: ಜನವರಿ 31 ಹಿಂದಿ, ಉರ್ದು, ಸಂಸ್ಕೃತ, ಫೆಬ್ರುವರಿ 1 ಭೂಗೋಳವಿಜ್ಞಾನ, ಗಣಿತ, ಬೇಸಿಕ್‌ ಮ್ಯಾಥ್ಸ್‌, ತರ್ಕಶಾಸ್ತ್ರ, ಶಿಕ್ಷಣ, ಗೃಹವಿಜ್ಞಾನ. ಫೆ.2 ಅರ್ಥಶಾಸ್ತ್ರ, ಜೀವವಿಜ್ಞಾನ, ಭೂಗರ್ಭವಿಜ್ಞಾನ, ಮನಃಶಾಸ್ತ್ರ, ಫೆ.4 ಇಂಗ್ಲಿಷ್‌, ಫೆ.5 ವ್ಯವಹಾರ ಅಧ್ಯಯನ, ಸಮಾಜಶಾಸ್ತ್ರ, ರಸಾಯನ ವಿಜ್ಞಾನ, ಫೆ.6 ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ, ಫೆ.7 ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೌತವಿಜ್ಞಾನ, ಮಾಹಿತಿ ತಂತ್ರಜ್ಞಾನ, ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಫೆ.8 ಇತಿಹಾಸ, ಎಲೆಕ್ಟ್ರಾನಿಕ್ಸ್‌, ಗಣಕವಿಜ್ಞಾನ, ಫೆ.9 ಕನ್ನಡ, ತಮಿಳು, ತೆಲುಗು, ಮಲಯಾಳಂ, ಮರಾಠಿ, ಅರೇಬಿಕ್‌, ಫ್ರೆಂಚ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.