ADVERTISEMENT

ಹಲವರಿಗೆ ನಾವು ಮೈತ್ರಿ ಸರ್ಕಾರ‌ ಕೆಡವಿದ್ದೇವೆ ಎಂಬ ಕೋಪ ಇದೆ: ಎಸ್.ಟಿ.ಸೋಮಶೇಖರ್

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2021, 5:56 IST
Last Updated 6 ಮಾರ್ಚ್ 2021, 5:56 IST
ಎಸ್.ಟಿ. ಸೋಮಶೇಖರ್
ಎಸ್.ಟಿ. ಸೋಮಶೇಖರ್    

ಬೆಂಗಳೂರು: ‘ನಾವು ಮೈತ್ರಿ ಸರ್ಕಾರ‌ ಕೆಡವಿದ್ದೇವೆ ಎಂಬ ಕೋಪ ಹಲವರಲ್ಲಿ ಇದೆ. ಮೈತ್ರಿ ಸರ್ಕಾರ ಪತನಗೊಳಿಸಿ ಬಿಜೆಪಿ ಸರ್ಕಾರ ತಂದಿದ್ದೇವೆ ಎಂಬ ಸಿಟ್ಟಿದೆ. ಹೀಗಾಗಿ ನಮ್ಮ ವಿರುದ್ಧ ತೇಜೋವಧೆ ಯತ್ನ ನಡೆಯುತ್ತಿದೆ’ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.

ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ನಾವು ಆರು‌ ಜನ ಸಚಿವರು ಕೋರ್ಟ್‌ಗೆ ಅರ್ಜಿ ಹಾಕಿದ್ದೇವೆ. ಉಳಿದ ಸಚಿವರು ಕೂಡಾ ಕೋರ್ಟ್‌ಗೆ ಅರ್ಜಿ ಹಾಕುತ್ತಾರೆ. ಇಂದು ಅಥವಾ ಸೋಮವಾರ ಉಳಿದ ಸಚಿವರೂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಿದ್ದಾರೆ’ ಎಂದರು‌

ADVERTISEMENT

‘ರಮೇಶ್ ಜಾರಕಿಹೊಳಿ‌ ಸಿ.ಡಿ ಪ್ರಕರಣ ಸಿಬಿಐ ತನಿಖೆಗೆ ವಹಿಸಬೇಕು. ನಾನು ಗೃಹಮಂತ್ರಿ ಜೊತೆ ಸಹ ಮಾತನಾಡಿದ್ದೇನೆ. ಈ ಪ್ರಕರಣ ಸಿಬಿಐಗೆ ವಹಿಸಬೇಕು’ ಎಂದು ಆಗ್ರಹಿಸಿದರು.

‘ನೋಡಪ್ಪ ಏನೋ ಆಗ್ತಿದೆ. ಗೊಲ್ ಮಾಲ್ ಮಾಡ್ತಿದ್ದಾರೆ ಅಂತ ಹಳೇ ಮಿತ್ರರರು ಹೇಳಿದ್ದರು. ಸತ್ಯ ಹೊರಗಡೆ ಬರುವಷ್ಟರಲ್ಲಿ ಎಲ್ಲ ಮಾಧ್ಯಮಗಳಲ್ಲಿ ತೊರಿಸುತ್ತೀರಾ. ಹೀಗಾಗಿ ನ್ಯಾಯಾಲಯಕ್ಕೆ ಹೋಗಿದ್ದೇವೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.