ADVERTISEMENT

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿಗೆ ಸೋಂಕು

ಕೋವಿಡ್–19: ಐದು ತಿಂಗಳ ಮಗು ಸೇರಿ 14 ಮಂದಿಗೆ ದೃಢ

​ಪ್ರಜಾವಾಣಿ ವಾರ್ತೆ
Published 21 ಜೂನ್ 2020, 14:48 IST
Last Updated 21 ಜೂನ್ 2020, 14:48 IST
ಕೋವಿಡ್‌ ಪತ್ತೆ ಪರೀಕ್ಷೆಯ ಸಂಗ್ರಹ ಚಿತ್ರ
ಕೋವಿಡ್‌ ಪತ್ತೆ ಪರೀಕ್ಷೆಯ ಸಂಗ್ರಹ ಚಿತ್ರ    

ಬಾಗಲಕೋಟೆ: ಸುದೀರ್ಘ ಅವಧಿಯ ನಂತರ ಜಿಲ್ಲೆಯಲ್ಲಿ ಒಂದೇ ದಿನ ಕೋವಿಡ್–19 ಸೋಂಕಿತರು ದೃಢಪಟ್ಟ ಸಂಖ್ಯೆ ಎರಡಂಕಿ ತಲುಪಿದೆ. ಭಾನುವಾರ ಒಟ್ಟು 14 ಮಂದಿಗೆ ಸೋಂಕು ದೃಢಪಟ್ಟಿದೆ. ಇವರಲ್ಲಿ ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲಿದ್ದ ಮುಧೋಳದ 16 ವರ್ಷದ ಬಾಲಕನಿಗೂ ಸೋಂಕು ತಗುಲಿದೆ. ಬಾಲಕನಿಗೆ ಪೂರಕ ಪರೀಕ್ಷೆಯಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಲಾಗಿದೆ.

ಮುಧೋಳದ ಸೋಂಕಿತ ವ್ಯಕ್ತಿಯ (ಪಿ–7547) ಸಂಪರ್ಕಕ್ಕೆ ಬಂದ ಎಂಟು ಮಂದಿಗೆ ಸೋಂಕು ತಗುಲಿದೆ. ಸೋಂಕಿತರಲ್ಲಿ ವ್ಯಕ್ತಿಯ ಕುಟುಂಬದ ನಾಲ್ವರು, ಅಕ್ಕಪಕ್ಕದ ಮನೆಯವರು ಸೇರಿದ್ದಾರೆ. ಇವರಲ್ಲಿ ಆರು ಹಾಗೂ 12 ವರ್ಷದ ಬಾಲಕಿಯರು, 16 ವರ್ಷದ ಬಾಲಕ, 36 ವರ್ಷದ ಮಹಿಳೆ, 45 ವರ್ಷದ ಮಹಿಳೆ, 53 ವರ್ಷದ ಪುರುಷ, 55 ವರ್ಷದ ಮಹಿಳೆ ಹಾಗೂ 56 ವರ್ಷದ ಪುರುಷ ಸೇರಿದ್ದಾರೆ.

ಉಳಿದ ಆರು ಮಂದಿಯಲ್ಲಿ ಬಾಗಲಕೋಟೆಯ 50 ವರ್ಷದ ಮಹಿಳೆ ಹಾಗೂ ಜಮಖಂಡಿಯ ಪುರುಷ ಮಹಾರಾಷ್ಟ್ರಕ್ಕೆ ಹೋಗಿ ಬಂದಿದ್ದಾರೆ. ಬಾಗಲಕೋಟೆಯ ನವನಗರದ ಸೆಕ್ಟರ್ ನಂ 36ರಲ್ಲಿ ವಾಸವಿರುವ 25 ವರ್ಷದ ಯುವತಿ, 58 ವರ್ಷದ ಮಹಿಳೆ, 33 ವರ್ಷದ ಪುರುಷ ಹಾಗೂ ಐದು ತಿಂಗಳ ಮಗು ಸೋಂಕು ದೃಢಪಟ್ಟಿದೆ.

ADVERTISEMENT

ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 131ಕ್ಕೆ ಏರಿಕೆಯಾಗಿದೆ. ಇವರಲ್ಲಿ 75 ವರ್ಷದ ವೃದ್ಧರೊಬ್ಬರು ಸಾವಿಗೀಡಾಗಿದ್ದು, 100 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.