ADVERTISEMENT

ಮಂತ್ರಾಲಯದಲ್ಲಿ ದೀಪೋತ್ಸವ ಪೂಜೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2020, 22:43 IST
Last Updated 5 ಆಗಸ್ಟ್ 2020, 22:43 IST
ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ರಾಮಮಂದಿರ ಶಿಲಾನ್ಯಾಸ ಪ್ರಯುಕ್ತ ರಾಮನ ಸುವರ್ಣ ಪ್ರತಿಮೆಗೆ ಬುಧವಾರ ದೀಪೋತ್ಸವ ಪೂಜೆ ನೆರವೇರಿಸಿದರು
ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ರಾಮಮಂದಿರ ಶಿಲಾನ್ಯಾಸ ಪ್ರಯುಕ್ತ ರಾಮನ ಸುವರ್ಣ ಪ್ರತಿಮೆಗೆ ಬುಧವಾರ ದೀಪೋತ್ಸವ ಪೂಜೆ ನೆರವೇರಿಸಿದರು   

ರಾಯಚೂರು: ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿದ ಪ್ರಯುಕ್ತ ಮಂತ್ರಾಲಯದಲ್ಲಿ ಶ್ರೀರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಬುಧವಾರ ವಿಶೇಷ ದೀಪೋತ್ಸವ ಪೂಜೆಮಾಡಿದರು.

ಸುವರ್ಣ ರಾಮದೇವರ ಮೂರ್ತಿಯನ್ನು ರಜತ ಸಿಂಹಾಸನದಲ್ಲಿ ಇರಿಸಿ, ದೀಪೋತ್ಸವ ಪೂಜೆ ನೆರವೇರಿಸಿದರು.

ಶ್ರೀ ಸುಬುಧೇಂದ್ರ ತೀರ್ಥರು, ‘ರಾಯರ ಮಧ್ಯಾರಾಧನೆ ದಿನದಂದು ರಾಮಮಂದಿರ ಶಿಲಾನ್ಯಾಸ ನೆರವೇರಿದ್ದು, ಇದು ಸರ್ವಕಾಲಕ್ಕೂ ನೆನಪಿನಲ್ಲಿ ಉಳಿಯುತ್ತದೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.