ADVERTISEMENT

ಸಮುದ್ರದಾಳದಲ್ಲಿ 'ಸುವರ್ಣ ತ್ರಿಭುಜ': ಚಿತ್ರ ಬಿಡುಗಡೆ ಮಾಡಿದ ನೌಕಾಪಡೆ

​ಪ್ರಜಾವಾಣಿ ವಾರ್ತೆ
Published 9 ಮೇ 2019, 18:33 IST
Last Updated 9 ಮೇ 2019, 18:33 IST
   

ಕಾರವಾರ:ಸಮುದ್ರದಲ್ಲಿ ಮುಳುಗಿರುವ ಮೀನುಗಾರಿಕಾ ದೋಣಿ ‘ಸುವರ್ಣ ತ್ರಿಭುಜ’ದ ಅವಶೇಷಗಳ ಚಿತ್ರಗಳನ್ನು ಭಾರತೀಯ ನೌಕಾಪಡೆ ಗುರುವಾರ ಬಿಡುಗಡೆ ಮಾಡಿದೆ.

ಮಹಾರಾಷ್ಟ್ರದ ಮಾಲ್ವಾನ್‌ನಿಂದ ಅಂದಾಜು 35 ಕಿ.ಮೀ. ದೂರದ ಆಳ ಸಮುದ್ರದಲ್ಲಿರುವ ದೋಣಿಯಅವಶೇಷಗಳನ್ನು ಮೇ 3ರಂದು ನೌಕಾಪಡೆಯ ಸಿಬ್ಬಂದಿ ಹಾಗೂ ಮೀನುಗಾರರು ಪತ್ತೆ ಹಚ್ಚಿದ್ದರು. ನೌಕಾಪಡೆಯ ‘ಐಎನ್‌ಎಸ್ ನಿರೀಕ್ಷಕ್’ ಹಡಗು ಹಾಗೂ ‘ಸೋನಾರ್’ ತಂತ್ರಜ್ಞಾನ ಬಳಸಿಕೊಂಡು ದೋಣಿ ಪತ್ತೆ ಹಚ್ಚಲಾಗಿತ್ತು.

ಬಳಿಕ ಸಮುದ್ರದಾಳಕ್ಕೆ ತೆರಳಿದ ನೌಕಾಪಡೆಯ ಮುಳುಗು ತಜ್ಞರು, ‘ಸುವರ್ಣ ತ್ರಿಭುಜ’ ದೋಣಿಯ ಅವಶೇಷಗಳಿರುವುದನ್ನು ಖಚಿತ ಪಡಿಸಿದ್ದರು. ಈ ಎಲ್ಲಪ್ರಕ್ರಿಯೆಗಳನ್ನು ವಿಡಿಯೊ ಚಿತ್ರೀಕರಣ ಹಾಗೂ ಫೋಟೊಗ್ರಾಫ್ಮಾಡಲಾಗಿತ್ತು.

ADVERTISEMENT

ಡಿ.15ರಂದು ಮಲ್ಪೆಯಿಂದ ಹೊರಟಿದ್ದ ದೋಣಿಯಲ್ಲಿ ಏಳು ಮೀನುಗಾರರಿದ್ದರು. ತಿಂಗಳುಗಳೇ ಕಳೆದರೂ ಅವರ ಹಾಗೂ ದೋಣಿಯ ಸುಳಿವು ಸಿಕ್ಕಿರಲಿಲ್ಲ. ಈವರೆಗೆದೋಣಿ ಮಾತ್ರ ಪತ್ತೆಯಾಗಿದ್ದು, ಮೀನುಗಾರರ ಸುಳಿವು ಇನ್ನೂಸಿಕ್ಕಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.