ADVERTISEMENT

ನಿರೀಕ್ಷಿತ ಚೇತರಿಕೆ ಕಾಣದ ಶಿವಕುಮಾರ ಸ್ವಾಮೀಜಿ ಆರೋಗ್ಯ

​ಪ್ರಜಾವಾಣಿ ವಾರ್ತೆ
Published 15 ಜನವರಿ 2019, 18:40 IST
Last Updated 15 ಜನವರಿ 2019, 18:40 IST
ಡಾ.ಶಿವಕುಮಾರ ಸ್ವಾಮೀಜಿ
ಡಾ.ಶಿವಕುಮಾರ ಸ್ವಾಮೀಜಿ   

ತುಮಕೂರು:‘ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯ ನಿರೀಕ್ಷಿತ ಚೇತರಿಕೆ ಕಾಣುತ್ತಿಲ್ಲ. ಶೇ 1ರಷ್ಟು ಸುಧಾರಣೆಯೂ ಇಲ್ಲ. ನಿತ್ಯವೂ ನೀಡುವ ಚಿಕಿತ್ಸೆಯನ್ನೇ ಮುಂದುವರಿಸಿದ್ದೇವೆ’ ಎಂದು ಸಿದ್ಧಗಂಗಾ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಪರಮೇಶ್ ತಿಳಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ರಕ್ತದ ಒತ್ತಡ, ನಾಡಿಮಿಡಿತ ಸಾಮಾನ್ಯವಾಗಿದೆ. ಶ್ವಾಸಕೋಶದಲ್ಲಿ ನೀರು ತುಂಬಿ
ಕೊಳ್ಳುವುದು ನಿಂತಿಲ್ಲ. ಅಲ್ಬುಮಿನ್ ಪೋಷಕಾಂಶವನ್ನು ಬಾಹ್ಯವಾಗಿ ನೀಡಿದರೆ ಕಿಡ್ನಿಗೆ ತೊಂದರೆ ಆಗುತ್ತದೆ. ಅಡ್ಡ ಪರಿಣಾಮಗಳು ಬೀರುತ್ತವೆ. ಆದ್ದರಿಂದ ಇದನ್ನು ದೀರ್ಘವಾಗಿ ನೀಡಲು ಸಾಧ್ಯವಿಲ್ಲ. ಅಲ್ಬುಮಿನ್, ರಕ್ತದ ಕಣಗಳು ದೇಹದಲ್ಲಿ ಸಹಜವಾಗಿ ಉತ್ಪತ್ತಿ ಆಗುವವರೆಗೂ ಚೇತರಿಕೆ ಸಾಧ್ಯವಿಲ್ಲ’ ಎಂದರು.

‘ಮಠದಲ್ಲಿಯೇ ಇರಬೇಕು ಎನ್ನುವುದು ಸ್ವಾಮೀಜಿ ಅವರ ಅಪೇಕ್ಷೆ ಆಗಿದೆ. ಈ ಬಗ್ಗೆ ನಾವು ಯೋಚಿಸುತ್ತಿದ್ದೇವೆ. ಆದರೆ ಇನ್ನೂ ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ’ ಎಂದು ಸಿದ್ಧಲಿಂಗ ಸ್ವಾಮೀಜಿ ಸ್ಪಷ್ಟಪಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.