ADVERTISEMENT

ಹಿರಿಯ ಗಾಯಕಿ ಟಿ.ಶಾರದಾ ನಿಧನ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2019, 18:14 IST
Last Updated 8 ಮಾರ್ಚ್ 2019, 18:14 IST
ಟಿ.ಶಾರದಾ
ಟಿ.ಶಾರದಾ   

ಬೆಂಗಳೂರು: ಹಿರಿಯ ಗಾಯಕಿ ಟಿ.ಶಾರದಾ(80) ಅವರು ಅನಾರೋಗ್ಯದಿಂದಾಗಿ ಗುರುವಾರನಿಧನರಾದರು.

ಶಾರದಾ ಅವರ ಪತಿ ಈ ಹಿಂದೆಯೇ ತೀರಿಕೊಂಡಿದ್ದಾರೆ. ಅವರಿಗೆ ತಲಾ ನಾಲ್ವರು ಸಹೋದರ, ಸಹೋದರಿಯರು ಇದ್ದಾರೆ.ಮಹಾರಾಣಿ ಕಾಲೇಜಿನಲ್ಲಿ ಸಂಗೀತ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದ ಅವರು, ‘ಕರ್ನಾಟಕ ಸಂಗೀತ ದರ್ಪಣ’ ಕೃತಿ ರಚಿಸಿದ್ದಾರೆ.

ಈ ತನಕ ಐದು ಸಂಪುಟಗಳು ಪ್ರಕಟಗೊಂಡಿದ್ದು, ಆರನೇ ಸಂಪುಟವನ್ನು ಹೊರತರುವ ತಯಾರಿ ನಡೆಸಿದ್ದರು.ಕರ್ನಾಟಕ ಸಂಗೀತ ಅಕಾಡೆಮಿಯಿಂದ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಸಂದಿವೆ. ಬನಶಂಕರಿಯ ಸ್ಮಶಾನದಲ್ಲಿ ಶುಕ್ರವಾರಅಂತ್ಯಕ್ರಿಯೆ ನೆರವೇರಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.