ADVERTISEMENT

ವಾಕ್ ಚತುರರು

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2019, 20:04 IST
Last Updated 10 ಮಾರ್ಚ್ 2019, 20:04 IST
ರಾಜ್ ಠಾಕ್ರೆ 
ರಾಜ್ ಠಾಕ್ರೆ    

ನಮ್ಮ ಪ್ರಜಾಪ್ರಭುತ್ವದ ನಿಜವಾದ ಶಕ್ತಿ ಕೊನೆಗೂ ಹಿಂದಿರುಗಿದೆ. ಭಾರತ ಇತಿಹಾಸದ ಕ್ರೂರ ಸರ್ವಾಧಿಕಾರಿ ಮತ್ತು ಒಕ್ಕೂಟ ವಿರೋಧಿ ಸರ್ಕಾರವನ್ನು ಕಿತ್ತೊಗೆಯುವ ಸಮಯ ಅಂತೂ ಬಂದಿದೆ. ನೋಟು ರದ್ದತಿ, ನಿರುದ್ಯೋಗ, ವ್ಯಾಪಾರಿಗಳಿಗೆ ಆಗಿರುವ ತೊಂದರೆ ಮತ್ತು ವಿವಿಧ ಸಮುದಾಯಗಳ ನಡುವಿನ ಸಾಮರಸ್ಯ ನಾಶಪಡಿಸಿದ್ದಕ್ಕೆ ಉತ್ತರ ಕಂಡುಕೊಳ್ಳುವ ಸಂದರ್ಭ ಬಂದಿದೆ

ಅರವಿಂದ ಕೇಜ್ರಿವಾ‌ಲ್, ದೆಹಲಿ ಮುಖ್ಯಮಂತ್ರಿ

ಜಮ್ಮು–ಕಾಶ್ಮೀರದ ವಿಧಾನಸಭಾ ಚುಣಾವಣೆಯನ್ನು ಮುಂದೂಡಿರುವುದು ಕಣಿವೆಯ ಪರಿಸ್ಥಿತಿ ನಿಭಾಯಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂಬುದುನ್ನು ಸೂಚಿಸುತ್ತದೆ. ಕಾಶ್ಮೀರದ ಪರಿಸ್ಥಿತಿ ಕೈಮೀರಿದ್ದು, ಒಟ್ಟಿಗೆ ಚುನಾವಣೆ ಎದುರಿಸಲಾಗದು ಎಂಬ ಸತ್ಯವನ್ನು ಕೇಂದ್ರ ಸ್ವತಃ ಒಪ್ಪಿಕೊಂಡಂತಾಗಿದೆ

ADVERTISEMENT

ಜಿ.ಎ. ಮೀರ್, ಜಮ್ಮು–ಕಾಶ್ಮೀರ ಕಾಂಗ್ರೆಸ್ ಅಧ್ಯಕ್ಷ

ನನ್ನ ಈ ಮಾತುಗಳನ್ನು ಬರೆದಿಟ್ಟುಕೊಳ್ಳಿ. ಲೋಕಸಭಾ ಚುನಾವಣೆಯಲ್ಲಿ ಸಮಸ್ಯೆಗಳನ್ನು ಮರೆಮಾಚಿ ಜನರ ಗಮನವನ್ನು ದೇಶಭಕ್ತಿಯತ್ತ ತಿರುಗಿಸಲು ಪುಲ್ವಾಮಾ ರೀತಿಯ ದಾಳಿಯನ್ನು ಇನ್ನೆರಡು ತಿಂಗಳಲ್ಲಿ ಸಂಘಟಿಸುವ ಸಾಧ್ಯತೆಯಿದೆ

ರಾಜ್ ಠಾಕ್ರೆ, ಮಹಾರಾಷ್ಟ್ರ ನವನಿರ್ಮಾಣ ಸೇನೆ ಅಧ್ಯಕ್ಷ

7 ಹಂತಗಳಲ್ಲಿ ಮತದಾನ ಘೋಷಣೆಯಾಗಿರುವುದ ಪಶ್ಚಿಮ ಬಂಗಾಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸರಿಯಲ್ಲ ಎಂಬುದನ್ನು ಸೂಚ್ಯವಾಗಿ ತೋರಿಸುತ್ತದೆ. ತಮ್ಮ ಸಾಂವಿಧಾನಿಕ ಹಕ್ಕು ಚಲಾಯಿಸದಂತೆ ಜನರನ್ನು ಹೇಗೆ ನಿಯಂತ್ರಿಸಲಾಗುತ್ತಿದೆ ಎಂದು ನೋಡಿ

ಮೊಹಮ್ಮದ್ ಸಲೀಂ, ಸಿಪಿಎಂ ಮುಖಂಡ

ಕೋಟ್ಯಂತರ ಭಾರತೀಯರ ಹಿತಾಸಕ್ತಿಗಾಗಿ ಮೋದಿ ನೇತೃತ್ವದ ಸರ್ಕಾರ ಹಲವು ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡಿದೆ. 130 ಕೋಟಿ ಜನರಲ್ಲಿ ಮನವಿ ಮಾಡುತ್ತೇನೆ, ಮತ್ತೊಮ್ಮೆ ನಮಗೆ ಆಶೀರ್ವಾದ ಮಾಡಿ

ಅಮಿತ್ ಶಾ, ಬಿಜೆಪಿ ಅಧ್ಯಕ್ಷ

ಹಲವು ರಾಜ್ಯಗಳಲ್ಲಿ ವಿವಿಧ ರಾಜಕೀಯ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳುವ ಮೂಲಕ ಕಾಂಗ್ರೆಸ್ ಪಕ್ಷದ ಶಕ್ತಿ ವೃದ್ಧಿಸುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ‘ಯುಪಿಎ ಪ್ಲಸ್ ಪ್ಲಸ್’ ಮೈತ್ರಿಕೂಟವು ಎನ್‌ಡಿಎ ಕೂಟವನ್ನು ಸೋಲಿಸಲಿದೆ

ಸಚಿನ್ ಪೈಲಟ್, ರಾಜಸ್ಥಾನ ಉಪಮುಖ್ಯಮಂತ್ರಿ

ಒಬ್ಬ ಕಲಾವಿದನಾಗಿ ಅವರು (ರಾಜ್ ಠಾಕ್ರೆ) ಬರಹಗಳನ್ನು (ಸ್ಕ್ರಿಪ್ಟ್) ಚೆನ್ನಾಗಿ ಓದಬಲ್ಲರು. ಆದರೆ ಇತ್ತೀಚಿನ ದಿನಗಳಲ್ಲಿ ಅವರ ಬರಹಗಳು ಬಾರಾಮತಿಯಿಂದ (ಎನ್‌ಸಿಪಿ ನಾಯಕ ಶರದ್ ಪವಾರ್) ಬರುತ್ತಿವೆ

ದೇವೇಂದ್ರ ಫಡಣವೀಸ್, ಮಹಾರಾಷ್ಟ್ರ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.