ADVERTISEMENT

ನಿಲ್ಲದ ಜನಪ್ರತಿನಿಧಿಗಳ ‘ನೀರ’ ಜಗಳ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2020, 16:27 IST
Last Updated 28 ಏಪ್ರಿಲ್ 2020, 16:27 IST
   

ವಿಜಯಪುರ: ತಿಡಗುಂದಿ ಜಲಕಾಲುವೆ ಲೋಕಾರ್ಪಣೆ ವಿವಾದ ಮಂಗಳವಾರ ಮತ್ತಷ್ಟು ಕಾವು ಪಡೆದುಕೊಂಡಿದೆ. ಕಾಂಗ್ರೆಸ್‌ ಶಾಸಕರ ನಡುವಿನ ಆರೋಪ, ಆಕ್ಷೇಪ, ಪ್ರತ್ಯಾರೋಪಗಳು ರಾಜಕೀಯ ಸ್ವರೂಪ ಪಡೆದುಕೊಂಡಿದೆ.

ಸರ್ಕಾರಿ ಕಾರ್ಯಕ್ರವಲ್ಲ: ‘ತಿಡಗುಂದಿ ಜಲಕಾಲುವೆ ಮೂಲಕ ನನ್ನ ಕ್ಷೇತ್ರಕ್ಕೆ ನೀರು ಹರಿದು ಬಂದಿರುವುದರಿಂದ ಗಂಗಾ ಪೂಜೆ ಮಾಡಿ, ಬಾಗಿನ ಅರ್ಪಿಸಿದ್ದೇನೆ. ಎಲ್ಲರನ್ನು ಆಹ್ವಾನಿಸಿ, ಸಮಾರಂಭ ಮಾಡಲು ಇದು ಸರ್ಕಾರಿ ಕಾರ್ಯಕ್ರಮವಲ್ಲ’ ಎಂದು ಶಾಸಕ ಎಂ.ಬಿ.ಪಾಟೀಲ ಹೇಳುವ ಮೂಲಕ ಲೋಕಾರ್ಪಣೆಗೆ ಆಕ್ಷೇಪವೆತ್ತಿದ್ದ ಇಂಡಿ ಶಾಸಕರ ವಿರುದ್ಧ ಹರಿಹಾಯ್ದಿದ್ದಾರೆ.

‘ಇಂಡಿ ಶಾಸಕರು ತಮ್ಮ ಮತಕ್ಷೇತ್ರಕ್ಕೆ ನೀರಿನ ಹಂಚಿಕೆ ಸಮರ್ಪಕವಾಗಿಲ್ಲ ಎಂದು ಪದೇಪದೇ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಹಾಗಾದರೆ ಅನ್ಯಾಯ ಮಾಡಿದ್ದು ಯಾರು. ಅಡ್ಡಗಾಲು ಹಾಕಿದವರು ಯಾರು’ ಎಂದು ಪ್ರಶ್ನಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.