ADVERTISEMENT

ಲೇಖಕ ನಾಗೇಶ ಹೆಗಡೆಗೆ ‘ಬಿಗ್ ಲಿಟ್ಲ್ ಬುಕ್’ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2018, 20:15 IST
Last Updated 21 ನವೆಂಬರ್ 2018, 20:15 IST
ಮುಂಬೈನಲ್ಲಿ ನಡೆದ ‘ಟಾಟಾ ಮಕ್ಕಳ ಸಾಹಿತ್ಯೋತ್ಸವ’ದಲ್ಲಿ ನಾಗೇಶ ಹೆಗಡೆ (ಮಧ್ಯದಲ್ಲಿ) ಅವರಿಗೆ ವಿಮರ್ಶಕ ಅನಿಲ್ ಧಾರ್ಕರ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಟಾಟಾ ಟ್ರಸ್ಟ್‌ನ ಸ್ವಾಹ ಸಾಹೂ ಇದ್ದರು
ಮುಂಬೈನಲ್ಲಿ ನಡೆದ ‘ಟಾಟಾ ಮಕ್ಕಳ ಸಾಹಿತ್ಯೋತ್ಸವ’ದಲ್ಲಿ ನಾಗೇಶ ಹೆಗಡೆ (ಮಧ್ಯದಲ್ಲಿ) ಅವರಿಗೆ ವಿಮರ್ಶಕ ಅನಿಲ್ ಧಾರ್ಕರ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಟಾಟಾ ಟ್ರಸ್ಟ್‌ನ ಸ್ವಾಹ ಸಾಹೂ ಇದ್ದರು   

ಬೆಂಗಳೂರು: ಟಾಟಾ ಟ್ರಸ್ಟ್‌ನ ಪರಾಗ್‌ ಇನಿಷಿಯೇಟಿವ್‌ ವತಿಯಿಂದ ಕೊಡಮಾಡುವ ‘ಬಿಗ್ ಲಿಟ್ಲ್ ಬುಕ್ ಪ್ರಶಸ್ತಿ’ಗೆಈ ಬಾರಿ ಕನ್ನಡದ ಹಿರಿಯ ಲೇಖಕ ಹಾಗೂ ‘ಪ್ರಜಾವಾಣಿ’ ಅಂಕಣಕಾರ ನಾಗೇಶ ಹೆಗಡೆ ಭಾಜನರಾಗಿದ್ದಾರೆ.

ಪ್ರತಿವರ್ಷ ಒಂದು ಭಾಷೆಯ ಶ್ರೇಷ್ಠ ಮಕ್ಕಳ ಸಾಹಿತಿಯನ್ನು ಗುರುತಿಸಿ ಗೌರವಿಸಲಾಗುತ್ತಿದೆ. ಈ ವರ್ಷ ಕನ್ನಡ ಭಾಷೆಯ ಲೇಖಕರನ್ನು ಪ್ರಶಸ್ತಿಗೆ ಆಯ್ದುಕೊಳ್ಳಲಾಗಿತ್ತು. ಈ ಪುರಸ್ಕಾರವು ₹ 5 ಲಕ್ಷ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ. ಮುಂಬೈನಲ್ಲಿ ನಡೆದ ಟಾಟಾ ಸಾಹಿತ್ಯೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

‘ಸಮೃದ್ಧ ಸಾಹಿತ್ಯ ಪರಂಪರೆ ಇರುವ ಕನ್ನಡ ಭಾಷೆಗೆ ಈ ವರ್ಷದ ಪ್ರಶಸ್ತಿ ಸಂದಿದ್ದು ಸಂತಸ ತಂದಿದೆ’ ಎಂದು ಪ್ರಶಸ್ತಿ ಪ್ರದಾನ ಮಾಡಿದ ಟಾಟಾ ಲಿಟ್ ಫೆಸ್ಟ್‌ನ ಸಂಯೋಜಕ ಹಾಗೂ ವಿಮರ್ಶಕ ಅನಿಲ್ ಧಾರ್ಕರ್ ಹೇಳಿದರು.

ADVERTISEMENT

ಮಕ್ಕಳ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದವರನ್ನು ಮೊದಲ ಸುತ್ತಿನಲ್ಲಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸುವ ಮೂಲಕ ಗುರುತಿಸಲಾಗಿತ್ತು. ಪುರಸ್ಕೃತರ ಹೆಸರನ್ನು ತಜ್ಞರ ಸಮಿತಿ ಅಂತಿಮಗೊಳಿಸಿತ್ತು. ಅಂತಿಮ ಸುತ್ತಿನಲ್ಲಿ ನಾ. ಡಿಸೋಜ, ತಿಪಟೂರಿನ ನಾಗರಾಜ ಶೆಟ್ಟಿ, ಕೋಲಾರದ ಸಿ.ಎಂ. ಗೋವಿಂದ ರೆಡ್ಡಿ ಮತ್ತು ನಾಗೇಶ ಹೆಗಡೆ ಅವರ ಹೆಸರುಗಳಿದ್ದವು.

ಹಿಂದಿನ ಎರಡು ವರ್ಷಗಳಲ್ಲಿ ಮರಾಠಿ ಮತ್ತು ಬಂಗಾಳಿ ಭಾಷೆಗಳಲ್ಲಿನ ಮಕ್ಕಳ ಸಾಹಿತ್ಯವನ್ನು ಪ್ರಶಸ್ತಿಗೆ ಪರಿಗಣಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.