ADVERTISEMENT

ಶಿಕ್ಷಕರ ಪ್ರತಿಭಟನೆ: ಸೆ. 3ಕ್ಕೆ ‘ಫ್ರೀಡಂ ಪಾರ್ಕ್‌’ ಚಲೋ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2025, 13:46 IST
Last Updated 12 ಆಗಸ್ಟ್ 2025, 13:46 IST
   

ಬೆಂಗಳೂರು: ವೃಂದ ಮತ್ತು ನೇಮಕಾತಿಯ ಹೊಸ ನಿಯಮಗಳನ್ನು 2017ರ ನಂತರ ನೇಮಕವಾದ ಶಿಕ್ಷಕರಿಗೆ ಅನ್ವಯಿಸಬೇಕು. ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ನೀಡಬೇಕು ಎನ್ನುವುದೂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸೆ. 3ರಂದು ‘ಫ್ರೀಡಂ ಪಾರ್ಕ್‌’ ಚಲೋ ಹಮ್ಮಿಕೊಂಡಿದೆ.

ಹೋರಾಟದ ಪೂರ್ವಭಾವಿಯಾಗಿ ಆ.12ರಂದು ಜಿಲ್ಲಾಮಟ್ಟದಲ್ಲಿ ಹೋರಾಟ ನಡೆಸಲಾಗುವುದು. ಆ. 25ರ ಒಳಗೆ ಬೇಡಿಕೆ ಈಡೇರಿಸದಿದ್ದರೆ 26ರಂದು ಶಾಲಾ ಶಿಕ್ಷಣ ಇಲಾಖೆಗೆ ಪತ್ರ ಬರೆಯಲಾಗುವುದು. ನಂತರ ಎಲ್ಲ ಶಿಕ್ಷಕರು ರಜೆ ಹಾಕಿ ‘ಫ್ರೀಡಂ ಪಾರ್ಕ್‌’ ಚಲೋ ಹಮ್ಮಿಕೊಳ್ಳುವರು. 1ರಿಂದ 5ನೇ ತರಗತಿಯವರೆಗೆ ಪಾಠ ಮಾಡುವ, 6ರಿಂದ 8ನೇ ತರಗತಿ ಪಾಠ ಬೋಧನೆ ಬಹಿಷ್ಕರಿಸುವ ಘೋಷಣೆ ಮಾಡಲಾಗುವುದು. ಸೆ. 4ರಂದು ಅಹೋರಾತ್ರಿ ಧರಣಿ ನಡೆಸಲಾಗುವುದು. 5ರಂದು ಪ್ರತಿಭಟನಾ ಸ್ಥಳದಲ್ಲೇ ಶಿಕ್ಷಕರ ದಿನಾಚರಣೆ ಆಚರಿಸಲಾಗುವುದು ಎಂದು ಸಂಘದ ಅಧ್ಯಕ್ಷ ಚಂದ್ರಶೇಖರ ನುಗ್ಗಲಿ, ಪ್ರಧಾನ ಕಾರ್ಯದರ್ಶಿ ಎಚ್‌.ಎಸ್‌. ಚೇತನ್‌ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT