ADVERTISEMENT

ಸಿಎಂ ಶಿಫಾರಸು ಇದ್ದರೂ ಶಿಕ್ಷಕರ ವೈಯಕ್ತಿಕ ವರ್ಗಾವಣೆ ಇಲ್ಲ

ಶಿಕ್ಷಕರ ವರ್ಗಾವಣೆ ಕಾಯ್ದೆ: ಮೇಲ್ಮನೆ ಅಂಗೀಕಾರ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2020, 19:39 IST
Last Updated 18 ಮಾರ್ಚ್ 2020, 19:39 IST
ವಿಧಾನಪರಿಷತ್ ಕಲಾಪದಲ್ಲಿ ಬುಧವಾರ ಸಚಿವ ಸುರೇಶ್ ಕುಮಾರ್ ಮಾತನಾಡಿದರು - ಪ್ರಜಾವಾಣಿ ಚಿತ್ರ
ವಿಧಾನಪರಿಷತ್ ಕಲಾಪದಲ್ಲಿ ಬುಧವಾರ ಸಚಿವ ಸುರೇಶ್ ಕುಮಾರ್ ಮಾತನಾಡಿದರು - ಪ್ರಜಾವಾಣಿ ಚಿತ್ರ   

ಬೆಂಗಳೂರು: ಶಿಕ್ಷಕರ ವರ್ಗಾವಣೆಯನ್ನು ಸರಳಗೊಳಿಸುವ ನಿಟ್ಟಿನಲ್ಲಿ ರೂಪಿಸಿರುವ ಶಿಕ್ಷಕರ ವರ್ಗಾವಣೆ ಕಾಯ್ದೆಗೆ ವಿಧಾನ ಪರಿಷತ್‌ ಬುಧವಾರ ಅಂಗೀಕಾರ ನೀಡಿತು.

ವಿವಿಧ ಪಕ್ಷಗಳ17 ಸದಸ್ಯರು ನಿಯಮ ರೂಪಿಸುವಾಗ ಕೆಲವೊಂದು ತಿದ್ದುಪಡಿಗಳನ್ನು ಮಾಡಬೇಕು ಎಂದು ಸಲಹೆ ನೀಡಿ, ಮಸೂದೆಯನ್ನು ಸ್ವಾಗತಿಸಿದರು.

‘ಮುಖ್ಯಮಂತ್ರಿ ಮತ್ತು ಶಾಸಕರ ಒತ್ತಾಯಕ್ಕೆ ಮಣಿದು ವೈಯಕ್ತಿಕ ನೆಲೆಯಲ್ಲಿವರ್ಗಾವಣೆ ಮಾಡುವುದಿಲ್ಲ, ಜನಗಣತಿ ಸಹಿತ ಕೆಲವೊಂದು ವಿಶೇಷ ಸಂದರ್ಭಗಳಲ್ಲಿ ವರ್ಗಾವಣೆ ಸಾಧ್ಯವಾಗದ ಸಂದರ್ಭದಲ್ಲಿ ಮಾತ್ರ ಸಾಮೂಹಿಕ ವರ್ಗಾವಣೆಗೆ ಅವಕಾಶ ನೀಡಲಾಗುತ್ತದೆ. ಹೀಗಾಗಿ ಈ ವಿಷಯದಲ್ಲಿ ಯಾವುದೇ ಸಂಶಯ ಬೇಡ’ ಎಂದು ಸಚಿವ ಸುರೇಶ್‌ಕುಮಾರ್ ಭರವಸೆ ನೀಡಿದರು.

ADVERTISEMENT

ಸದಸ್ಯರ ಸಲಹೆಗಳನ್ನು ನಿಯಮ ರೂಪಿಸುವಾಗ ಸೇರಿಸಿಕೊಳ್ಳಲಾಗುವುದು ಎಂದೂ ಅವರು ಹೇಳಿದರು. ಸದನ ಧ್ವನಿಮತದಿಂದ ಮಸೂದೆ ಅಂಗೀಕರಿಸಿತು.

ಹೊರಟ್ಟಿ ಕೊಡುಗೆಗೆ ಮೆಚ್ಚುಗೆ: ಸರ್ಕಾರ ರೂಪಿಸಿರುವ ವರ್ಗಾವಣೆ ಮಸೂದೆಗೆ ಬೀಜ ಬಿತ್ತಿದವರು ಬಸವರಾಜ ಹೊರಟ್ಟಿ. ಭಾರಿ ಭ್ರಷ್ಟಾಚಾರ ತಪ್ಪಿಸಲು ಅವರು ರೂಪಿಸಿದ ಕಾಯ್ದೆ ರಾಜ್ಯದ ಇತಿಹಾಸದಲ್ಲಿ ಒಂದು ದಿಟ್ಟ ಹೆಜ್ಜೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.