ADVERTISEMENT

ಪರಿಷತ್‌ ಸ್ಥಾನಕ್ಕೆ ತೇಜಸ್ವಿನಿಗೌಡ ರಾಜೀನಾಮೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2024, 15:27 IST
Last Updated 27 ಮಾರ್ಚ್ 2024, 15:27 IST
ತೇಜಸ್ವಿನಿ ಗೌಡ
ತೇಜಸ್ವಿನಿ ಗೌಡ   

ಬೆಂಗಳೂರು: ವಿಧಾನಪರಿಷತ್‌ನ ಬಿಜೆಪಿ ಸದಸ್ಯೆ ತೇಜಸ್ವಿನಿಗೌಡ ಅವರು ಪರಿಷತ್‌ನ ಸದಸ್ಯತ್ವಕ್ಕೆ ಬುಧವಾರ ರಾಜೀನಾಮೆ ನೀಡಿದರು.

ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅವರ ಮನೆಯಲ್ಲೇ ತೇಜಸ್ವಿನಿ ರಾಜೀನಾಮೆ ಪತ್ರ ನೀಡಿದ್ದು, ಸಭಾಪತಿಯವರು ಅಂಗೀಕರಿಸಿದ್ದಾರೆ. ಅವರ ಸದಸ್ಯತ್ವದ ಅವಧಿ ಜೂನ್‌ 24ರವರೆಗೆ ಇದೆ.

ರಾಜೀನಾಮೆ ಕುರಿತು ಮಾತನಾಡಿದ ಬಸವರಾಜ ಹೊರಟ್ಟಿ, ‘ತೇಜಸ್ವಿನಿ ಅವರ ಅವಧಿ ಜೂನ್‌ವರೆಗೆ ಇದ್ದು, ಅವರ ಮನವೊಲಿಕೆಗೆ ಸಾಕಷ್ಟು ಪ್ರಯತ್ನಿಸಿದೆ. ವೈಯಕ್ತಿಕ ಕಾರಣಗಳಿಗಾಗಿ ರಾಜೀನಾಮೆ ನೀಡುತ್ತಿರುವುದಾಗಿ ಹೇಳಿದರು. ಅಂಗೀಕರಿಸಿದ್ದೇನೆ’ ಎಂದರು.

ADVERTISEMENT

ಇತ್ತೀಚೆಗೆ ಜೆಡಿಎಸ್‌ನ ಸದಸ್ಯ ಮರಿತಿಬ್ಬೇಗೌಡ ಅವರು ರಾಜೀನಾಮೆ ನೀಡಿ ಕಾಂಗ್ರೆಸ್‌ ಪಕ್ಷವನ್ನು ಸೇರಿದರು. ಈ ಸಂದರ್ಭದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಸವರಾಜ ಹೊರಟ್ಟಿ, ‘ನಾನು ಸಭಾಪತಿ ಆದ ಬಳಿಕ ಸುಮಾರು 11 ಮಂದಿ ರಾಜೀನಾಮೆ ನೀಡಿದ್ದಾರೆ. ಇದೊಂದು ಇತಿಹಾಸ’ ಎಂದು ಹೇಳಿದ್ದರು. 

ತೇಜಸ್ವಿನಿಯವರು ಮೈಸೂರು–ಕೊಡಗು ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಇದಕ್ಕಾಗಿ ಪ್ರಯತ್ನ ನಡೆಸಿದ್ದರು. ಪ್ರಯತ್ನ ಫಲನೀಡದೇ ಇರುವುದಕ್ಕೆ, ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್‌ ಕಡೆ ಮುಖ ಮಾಡಿದ್ದಾರೆ.

2018 ರಿಂದ ಈಚೆಗೆ ಪರಿಷತ್‌ಗೆ ರಾಜೀನಾಮೆ ನೀಡಿದವರು(ವರ್ಷ;ಸದಸ್ಯರು;ಕಾರಣ)

2018;ವಿ.ಎಸ್‌.ಉಗ್ರಪ್ಪ;ಬಳ್ಳಾರಿ ಲೋಕಸಭೆ ಉಪಚುನಾವಣೆಯಲ್ಲಿ ಗೆಲುವು

2021;ಶ್ರಿನಿವಾಸಮಾನೆ;ಹಾನಗಲ್ ವಿಧಾನಸಭಾ ಉಪಚುನಾವಣೆಯಲ್ಲಿ ಗೆಲುವು

2021;ಸಿ.ಆರ್.ಮನೋಹರ್;ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರಲು

2022;ಸಿ.ಎಂ.ಇಬ್ರಾಹಿಂ;ಕಾಂಗ್ರೆಸ್‌ ಬಿಟ್ಟು ಜೆಡಿಎಸ್ ಸೇರಲು

2023;ಪುಟ್ಟಣ್ಣ; ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರಲು

2023;ಬಾಬುರಾವ್‌ ಚಿಂಚನಸೂರ್‌; ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರಲು

2023;ಆರ್‌.ಶಂಕರ್‌; ಬಿಜೆಪಿ ಟಿಕೆಟ್‌ ಸಿಗದ ಕಾರಣ

2023;ಲಕ್ಷ್ಮಣ ಸವದಿ;ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಲು

2023;ಆಯನೂರು ಮಂಜುನಾಥ್; ಬಿಜೆಪಿ ಟಿಕೆಟ್‌ ಸಿಗದ ಕಾರಣ

2024;ಜಗದೀಶ ಶೆಟ್ಟರ್‌; ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಲು

2024;ಮರಿತಿಬ್ಬೆಗೌಡ;ಜೆಡಿಎಸ್‌ ಬಿಟ್ಟು ಕಾಂಗ್ರೆಸ್ ಸೇರಲು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.