ADVERTISEMENT

ಮಳೆಯ ನೀರಿನಲ್ಲಿ ಮುಳುಗಿದ್ದ ಶಿಡ್ಲಗುಂಡಿ ರಸ್ತೆ

ಕೆಲಕಾಲ ಸಂಪರ್ಕ ಕಡಿತ

​ಪ್ರಜಾವಾಣಿ ವಾರ್ತೆ
Published 2 ಜೂನ್ 2020, 16:02 IST
Last Updated 2 ಜೂನ್ 2020, 16:02 IST
ಮುಂಡಗೋಡ-ಯಲ್ಲಾಪುರ ನಡುವಿನ ಶಿಡ್ಲಗುಂಡಿ ತಾತ್ಕಾಲಿಕ ರಸ್ತೆ ಸೋಮವಾರದ ಮಳೆಗೆ ನೀರಿನಲ್ಲಿ ಮುಳುಗಿತ್ತು
ಮುಂಡಗೋಡ-ಯಲ್ಲಾಪುರ ನಡುವಿನ ಶಿಡ್ಲಗುಂಡಿ ತಾತ್ಕಾಲಿಕ ರಸ್ತೆ ಸೋಮವಾರದ ಮಳೆಗೆ ನೀರಿನಲ್ಲಿ ಮುಳುಗಿತ್ತು   

ಮುಂಡಗೋಡ: ತಾಲ್ಲೂಕಿನ ಶಿಡ್ಲಗುಂಡಿಯಲ್ಲಿರುವ ತಾತ್ಕಾಲಿಕ ರಸ್ತೆ, ಸೋಮವಾರ ಸಂಜೆ ಮಳೆಯ ನೀರಿನಲ್ಲಿ ಮುಚ್ಚಿ, ಕೆಲವು ಗಂಟೆಗಳ ಕಾಲ ಸಂಚಾರ ಬಂದಾಗಿತ್ತು. ಇದರಿಂದ ಯಲ್ಲಾಪುರ-ಮುಂಡಗೋಡ ನಡುವಿನ ಸಂಪರ್ಕ ಬಂದಾಗಿತ್ತು.

ಹುಬ್ಬಳ್ಳಿ-ಧಾರವಾಡ ಹಾಗೂ ತಾಲ್ಲೂಕಿನಲ್ಲಿ ಸುರಿದ ಮಳೆಯಿಂದ ಹೆಚ್ಚಿನ ಪ್ರಮಾಣದ ನೀರು, ಬೇಡ್ತಿ ಹಳ್ಳದಲ್ಲಿ ಹರಿದು ಬಂತು. ರಭಸದ ನೀರಿನ ಜೊತೆಗೆ ಗಿಡಗಂಟಿಗಳು ತೇಲಿ ಬಂದು ರಸ್ತೆ ಮುಳುಗುವಂತಾಯಿತು.

ಸಂಜೆಯ ವೇಳೆಗೆ ಲೋಕೋಪಯೋಗಿ ಎಂಜಿನಿಯರ್ ಬಿ.ಆರ್.ದಯಾನಂದ ಮತ್ತು ಸಿಬ್ಬಂದಿ, ತಾತ್ಕಾಲಿಕ ರಸ್ತೆಯಲ್ಲಿ ಸಿಲುಕಿದ್ದ ಗಿಡಗಂಟಿಗಳನ್ನು ತೆರವುಗೊಳಿಸಿದರು. ನಂತರ ನೀರು ಪೈಪ್‍ಗಳಲ್ಲಿ ಹರಿಯುತ್ತಿದ್ದಂತೆ, ರಸ್ತೆ ಮೇಲಿನ ನೀರಿನ ಪ್ರಮಾಣ ಕಡಿಮೆಯಾಯಿತು.
'ಸೋಮವಾರ ಸಂಜೆಯೇ ರಸ್ತೆ ತೆರವುಗೊಳಿಸಲಾಗಿದ್ದು, ವಾಹನ ಸಂಚಾರಕ್ಕೆ ಮುಕ್ತವಾಗಿದೆ' ಎಂದು ಎಂಜಿನಿಯರ್ ಸುಭಾಷ್ ವಡ್ಡಟ್ಟಿ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.