ಮೈಸೂರು: ಮೈಸೂರು ವಿಶ್ವವಿದ್ಯಾಲಯದಲ್ಲಿ 2016ರ ಡಿಸೆಂಬರ್‌ನಲ್ಲಿ ನೇಮಕಗೊಂಡಿದ್ದ 96 ಬೋಧಕೇತರ ಸಿಬ್ಬಂದಿಯನ್ನು ಕೂಡಲೇ ಕರ್ತವ್ಯದಿಂದ ಬಿಡುಗಡೆಗೊಳಿಸುವಂತೆ ಉನ್ನತ ಶಿಕ್ಷಣ ಇಲಾಖೆ ಆದೇಶಿಸಿದೆ.
ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆ
ಸಿದ ಆರೋಪಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಸೂಚಿಸಲಾಗಿದೆ.
ವಿ.ವಿ ಕುಲಪತಿಯಾಗಿದ್ದ ಪ್ರೊ.ಕೆ.ಎಸ್.ರಂಗಪ್ಪ ಅವರ ಅಧಿಕಾರ ಅವಧಿ ಮುಗಿಯಲು ಕೆಲವು ದಿನಗಳು ಬಾಕಿ ಇರುವಂತೆ ನಡೆದಿದ್ದ ಬೋಧಕೇತರ ಸಿಬ್ಬಂದಿಯ ನೇಮಕಾತಿಯಲ್ಲಿ ಮೀಸ
ಲಾತಿ ನಿಯಮಗಳನ್ನು ಉಲ್ಲಂಘಿಸಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಕುಲಪತಿಯಾಗಿದ್ದ ರಂಗಪ್ಪ, ಕುಲಸಚಿವರಾಗಿದ್ದ ಪ್ರೊ.ಆರ್.ರಾಜಣ್ಣ, ಉಪ ಕುಲಸಚಿವ (ಆಡಳಿತ) ಎಂ.ವಿ.ವಿಷಕಂಠ ಅವರು ಮೀಸಲಾತಿ ನಿಯಮಗಳನ್ನು ಉಲ್ಲಂಘಿಸಿ 96 ಬೋಧಕೇತರ ಸಿಬ್ಬಂದಿ
ಯನ್ನು ನೇಮಿಸಿಕೊಂಡಿದ್ದರು ಎಂದು ಆರೋಪಿಸಿ ಪ್ರಭಾರಿ ಕುಲಪತಿಯಾಗಿದ್ದ ಪ್ರೊ.ದಯಾನಂದ ಮಾನೆ ರಾಜ್ಯಪಾ
ಲರಿಗೆ ದೂರು ಸಲ್ಲಿಸಿದ್ದರು. ಡಾ.ಎಂ.ಆರ್.ನಿಂಬಾಳ್ಕರ್, ಡಾ.ಕನುಭಾಯ್ ಸಿ.ಮಾವನಿ ನೇತೃತ್ವದಲ್ಲಿ ರಾಜ್ಯಪಾಲರು ತನಿಖಾ ಸಮಿತಿ ನೇಮಿಸಿದ್ದರು.
‘ಮೀಸಲಾತಿ ನಿಯಮ ಉಲ್ಲಂಘನೆಯಾಗಿದ್ದು, ಸಿಬ್ಬಂದಿಯನ್ನು ವಜಾಗೊಳಿಸಬಹುದು. ನೇಮಕಾತಿ ಮಾಡಿದವರ ಹಾಗೂ ಅಧಿಕಾರ ದುರುಪಯೋಗಪಡಿಸಿಕೊಂಡವರ ವಿರುದ್ಧ ಕ್ರಮ ತೆಗೆದುಕೊಳ್ಳಬಹುದು’ ಎಂದು 2017ರ ಜುಲೈ 12ರಂದು ರಾಜ್ಯಪಾಲರಿಗೆ ತನಿಖಾ ಸಮಿತಿಯು ವರದಿ ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.