ಬೆಳಗಾವಿ: ಕುಟುಂಬವೊಂದು ವೃದ್ಧರೊಬ್ಬರ ಸಿಟಿ ಸ್ಕ್ಯಾನ್ ಮಾಡಿಸಲು ವ್ಹೀಲ್ಚೇರ್ನಲ್ಲೇ ಕರೆದುಕೊಂಡು ಬಂದಿದ್ದ ಘಟನೆ ನಗರದಲ್ಲಿ ಭಾನುವಾರ ನಡೆದಿದೆ.
‘ಒಂದು ಕಿ.ಮೀ. ದೂರದಲ್ಲಿರುವ ಸ್ಕ್ಯಾನಿಂಗ್ ಕೇಂದ್ರಕ್ಕೆ ಕರೆದೊಯ್ಯಲು ಖಾಸಗಿ ಆಂಬುಲೆನ್ಸ್ನವರು ₹ 4 ಸಾವಿರ ಕೇಳಿದರು. ಆಟೊ ಕೂಡ ಸಿಗಲಿಲ್ಲ. ಹೀಗಾಗಿ, ಅನಿವಾರ್ಯವಾಗಿ ವ್ಹೀಲ್ಚೇರ್ ಅನ್ನೇ ತಳ್ಳಿಕೊಂಡು ಬಂದಿದ್ದೇವೆ’ ಎಂದು ಕುಟುಂಬದವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು. ಗೋಂಧಳಿ ಗಲ್ಲಿಯ ಅವರು ಅಯೋಧ್ಯಾ ನಗರದ ಸ್ಕ್ಯಾನಿಂಗ್ ಕೇಂದ್ರಕ್ಕೆ ಬಂದಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.