ADVERTISEMENT

ಕೇಂದ್ರಸಚಿವ ಜೋಶಿ ಹೆಲಿಕಾಪ್ಟರ್‌ ಲ್ಯಾಂಡಿಂಗ್‌ ವೇಳೆ ನೆಲಕ್ಕುರುಳಿದ ಬ್ಯಾರಿಕೇಡ್‌

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2023, 13:16 IST
Last Updated 18 ಮಾರ್ಚ್ 2023, 13:16 IST
ವಿಜಯಪುರ ನಗರದ ಸೈನಿಕ್‌ ಶಾಲೆಯ ಹೆಲಿಫ್ಯಾಡ್‌ನಲ್ಲಿ ಶನಿವಾರ ಕೇಂದ್ರ ಸಂಸದೀಯ ವ್ಯವಹಾರಗಳ ಹಾಗೂ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ ಇಳಿಯುವಾಗ ಹೆಲಿಫ್ಯಾಡ್‌ನ ಸುತ್ತಲು ಅಳವಡಿಸಲಾಗಿದ್ದ ಬ್ಯಾರಿಕೇಡ್‌ಗಳು ನೆಲಕ್ಕುರುಳಿ ಬಿದ್ದವು 
ವಿಜಯಪುರ ನಗರದ ಸೈನಿಕ್‌ ಶಾಲೆಯ ಹೆಲಿಫ್ಯಾಡ್‌ನಲ್ಲಿ ಶನಿವಾರ ಕೇಂದ್ರ ಸಂಸದೀಯ ವ್ಯವಹಾರಗಳ ಹಾಗೂ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ ಇಳಿಯುವಾಗ ಹೆಲಿಫ್ಯಾಡ್‌ನ ಸುತ್ತಲು ಅಳವಡಿಸಲಾಗಿದ್ದ ಬ್ಯಾರಿಕೇಡ್‌ಗಳು ನೆಲಕ್ಕುರುಳಿ ಬಿದ್ದವು    

ವಿಜಯಪುರ: ಕೇಂದ್ರ ಸಂಸದೀಯ ವ್ಯವಹಾರಗಳ ಹಾಗೂ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ ಅವರು ನಗರದ ಸೈನಿಕ್‌ ಶಾಲೆಯ ಹೆಲಿಪ್ಯಾಡ್‌ಗೆ ಶನಿವಾರ ಬಂದಿಳಿಯುವಾಗ ಹೆಲಿಪ್ಯಾಡ್‌ನ ಸುತ್ತಲು ಅಳವಡಿಸಲಾಗಿದ್ದ ಬ್ಯಾರಿಕೇಡ್‌ಗಳು ನೆಲಕ್ಕುರುಳಿ ಬಿದ್ದವು.

ವಿಜಯಪುರ ನಗರದ ಸೈನಿಕ್‌ ಶಾಲೆ ಆವರಣದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಕೇಂದ್ರ, ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಫಲಾನುಭವಿಗಳ ಸಮ್ಮೇಳನದಲ್ಲಿ ಭಾಗವಹಿಸಲು ಹೆಲಿಕಾಫ್ಟರ್‌ನಲ್ಲಿ ಆಗಮಿಸಿದ ಸಚಿವರು ಲ್ಯಾಂಡ್‌ ಆಗುವ ವೇಳೆ ಐದಾರು ಬ್ಯಾರಿಕೇಡ್‌ಗಳು ರಭಸದ ಗಾಳಿಗೆ ಅಲ್ಲಿಯೇ ಉರುಳಿಬಿದ್ದವು.

ತಕ್ಷಣ ಪೊಲೀಸರು ಅವುಗಳನ್ನು ಸರಿಪಡಿಸಿದರು. ಘಟನೆಯಿಂದ ಯಾವುದೇ ತೊಂದರೆಯಾಗಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.