ಪಿ.ಆರ್. ರಮೇಶ್
ಬೆಂಗಳೂರು: ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ‘ತಿಗಳ ಸಮೂಹ’ದ ಅಡಿಯಲ್ಲಿ ಒಟ್ಟು 45 ಉಪ ಜಾತಿಗಳನ್ನ ಪರಿಗಣಿಸಬೇಕು’ ಎಂದು ಆ ಸಮುದಾಯದ ಮುಖಂಡರೂ ಆಗಿರುವ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಪಿ.ಆರ್. ರಮೇಶ್ ಆಗ್ರಹಿಸಿದ್ದಾರೆ.
ಹಿಂದುಳಿದ ವರ್ಗಗಳ ಆಯೋಗಕ್ಕೆ ಈ ಬಗ್ಗೆ ಅವರು ಮನವಿ ಸಲ್ಲಿಸಿದ್ದಾರೆ.
‘ಮೈಸೂರು ಸರ್ಕಾರದ 1901ರ ಜಾತಿ ಜನಗಣತಿಯಂತೆ ತಿಗಳ ಅಡಿಯಲ್ಲಿ ಅಗ್ನಿ, ಅಗ್ರವಣ್ಣಿಯಾರ್, ಅರವ, ಬ್ರಹ್ಮರಿಷಿ, ಧರ್ಮರಾಜು ಕಾಪು, ಯನ್ನೇರಿ, ಗೌಡ, ಗುಡನೋರು, ಹಳೇ ತಿಗಳ, ಹಳ್ಳಿ, ಕಂದಪಳ್ಳಿ, ಕನ್ನಡ, ಮಲರ್ಮಚತ್ರಿ, ಪಳ್ಳಿ, ಪಾಂಡ್ಯ, ರಾಜ, ರೆಡ್ಡಿ, ಸಾಂಬ, ತಿಗಳ, ತೋಟ, ಉಳ್ಳಿ, ವಣ್ಣೆ, ವಣ್ಣಿಕುಲ, ಯಾನಾದಿ ಹೀಗೆ ಒಟ್ಟ 24 ಉಪ ಜಾತಿಗಳನ್ನು ಗುರುತಿಸಲಾಗಿದೆ. 2002ರ ಕರ್ನಾಟಕ ಸರ್ಕಾರದ ಅಧಿಸೂಚನೆಯಲ್ಲಿ ತಿಗಲ, ಅಗ್ನಿವಂಶ, ಅಗ್ನಿವನ್ನಿ, ಅಗ್ನಿಕುಲ ಕ್ಷತ್ರಿಯ, ಧರ್ಮರಾಜ ಕಾಪು, ಪಳ್ಳಿ, ಶಂಭುಕುಲ ಕ್ಷತ್ರಿಯ, ತಿಗಳ, ವನ್ನಿಯಾರ್, ವನ್ನಿಕುಲ ಕ್ಷತ್ರಿಯ, ತಿಗ್ಲರ್, ಕುರೋವನ್ ಹೀಗೆ 12 ಉಪ ಜಾತಿಗಳನ್ನು ನಮೂದಿಸಲಾಗಿದೆ’ ಎಂದು ಅವರು ವಿವರಿಸಿದ್ದಾರೆ.
‘ಆಯೋಗವು ಸಮೀಕ್ಷೆಗೆ ಸಿದ್ಧಪಡಿಸಿದ ಪಟ್ಟಿಯಲ್ಲಿ ‘ತಿಗಳ ಸಮೂಹದ’ ಉಪ ಜಾತಿಗಳ ಪಟ್ಟಿಯಲ್ಲಿ ಎಲೆ ತಿಗಳ, ತೋಟ ಗೌಡ, ಉಳ್ಳಿ ತಿಗಳ ಎಂಬ ಮೂರು ಉಪ ಜಾತಿಗಳನ್ನೂ ಸೇರಿಸಬೇಕು’ ಎಂದು ಅವರು ಮನವಿ ಮಾಡಿದ್ದಾರೆ.
ಪದ್ಧತಿ ಭಾಷೆಗಳಿಗೆ ಅನುಗುಣವಾಗಿ ‘ತಿಗಳ ಸಮೂಹ’ವು ಬೇರೆ ಬೇರೆ ಉಪ ಜಾತಿಗಳಲ್ಲಿ ಗುರುತಿಸಿಕೊಂಡಿವೆ. ಈ ಅಂಶವನ್ನು ಆಯೋಗ ಗಣನೆಗೆ ತೆಗೆದುಕೊಳ್ಳಬೇಕುಪಿ.ಆರ್. ರಮೇಶ್ ತಿಗಳ ಸಮುದಾಯದ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.