ADVERTISEMENT

ಬೋನಿಗೆ ಬಿದ್ದ ಹುಲಿ; ನಷ್ಟ ಭರಿಸಲು ಗ್ರಾಮಸ್ಥರಿಂದ ಒತ್ತಾಯ

ಬೋನಿಗೆ ಬಿದ್ದ 2ನೆ ಹುಲಿ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2018, 3:47 IST
Last Updated 29 ಅಕ್ಟೋಬರ್ 2018, 3:47 IST
   

ಮೈಸೂರು: ಎಚ್.ಡಿ.ಕೋಟೆ ತಾಲ್ಲೂಕಿನ ಅಗಸನಹುಂಡಿ‌ ಗ್ರಾಮದಲ್ಲಿ ಹುಲಿಯೊಂದು ಬೋನಿಗೆ ಬಿದ್ದಿದೆ. ಇದನ್ನು ತೆಗೆದುಕೊಂಡು ಹೋಗಲು ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯ ಸಿಬ್ಬಂದಿಯ ಜತೆಗೆ ಗ್ರಾಮಸ್ಥರು ಜಟಾಪಟಿ ನಡೆಸುತ್ತಿದ್ದಾರೆ.

ಹುಲಿಯಿಂದ ಆಗಿರುವ ನಷ್ಟವನ್ನು ಕೊಟ್ಟು ಬೋನನ್ನು ತೆಗೆದುಕೊಂಡು ಹೋಗುವಂತೆ‌ ಒತ್ತಾಯಿಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನೆಲೆಸಿದೆ.

ಸಾಮಾನ್ಯವಾಗಿ ಚಿರತೆಗಳು‌ ಬೋನಿಗೆ ಬೀಳುತ್ತವೆ. ಹುಲಿ ಬೋನಿಗೆ ಸಿಲುಕುವುದು ಅಪರೂಪ. ತಾಲ್ಲೂಕಿನಲ್ಲಿ ಇದುವರೆಗೆ ಬೋನಿಗೆ ಬಿದ್ದ 2ನೆ ಹುಲಿ ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಕಳೆದ ಒಂದು ತಿಂಗಳಿನಿಂದ ಗ್ರಾಮದಲ್ಲಿ ಈ ಹುಲಿಯು ದನಕರುಗಳು ಹಾಗೂ ಮೇಕೆಗಳನ್ನು ತಿಂದು‌ ಹಾಕಿತ್ತು ಎಂದು ಗ್ರಾಮಸ್ಥರು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.