ADVERTISEMENT

ಗರ್ಭಿಣಿ ಹುಲಿ ಕಳೇಬರ ಪತ್ತೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2019, 19:49 IST
Last Updated 23 ಫೆಬ್ರುವರಿ 2019, 19:49 IST

ಚಿಕ್ಕಮಗಳೂರು: ಜಿಲ್ಲೆಯ ಹೆಬ್ಬೆ ಅರಣ್ಯ ಪ್ರದೇಶದ ತೇಗರಗುಡ್ಡದಲ್ಲಿ ಗರ್ಭಿಣಿ ಹುಲಿಯ (8) ಕಳೇಬರ ಪತ್ತೆಯಾಗಿದೆ. ಹೊಟ್ಟೆಯೊಳಗಿದ್ದ ಎರಡು ಮರಿಗಳೂ ಮೃತಪಟ್ಟಿವೆ.

ಅರಣ್ಯ ಸಿಬ್ಬಂದಿ ವಾಸನೆ ಗ್ರಹಿಸಿ ಜಾಡು ಹಿಡಿದು ಸಾಗಿದಾಗ ಹುಲಿ ಮೃತಪಟ್ಟಿರುವುದು ಗೊತ್ತಾಗಿದೆ. ಶನಿವಾರ ಮರಣೋತ್ತರ ಪರೀಕ್ಷೆಗೆ ಅಂಗಾಂಶ ಸಂಗ್ರಹಿಸಲಾಗಿದೆ.

ಭದ್ರಾ ಹುಲಿ ಯೋಜನೆ ನಿರ್ದೇಶಕ ಎಸ್‌.ಧನಂಜಯ್‌ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಹುಲಿಯ ದೇಹದ ಮೇಲೆ ಗಾಯದ ಗುರುತುಗಳು ಇವೆ. ಮುಂದಿನ ಕಾಲಿನ ಭುಜ ಕೊಂಚ ಜರುಗಿರುವುದು ಕಂಡುಬಂದಿದೆ. ಅಂಗಾಂಶಗಳನ್ನು ವೈದ್ಯರು ಸಂಗ್ರಹಿಸಿದ್ದಾರೆ. ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳಿಸಲಾಗುವುದು’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.