ADVERTISEMENT

ಲಾಕ್‌ಡೌನ್ ವೇಳೆ ಸಂಚಾರ ನಿಯಮ ಉಲ್ಲಂಘನೆ: 94.97 ಲಕ್ಷ ದಂಡ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 17 ಮೇ 2020, 8:57 IST
Last Updated 17 ಮೇ 2020, 8:57 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಬೆಂಗಳೂರಿನಲ್ಲಿ ಲಾಕ್‌ಡೌನ್‌ ವೇಳೆ ನಿಯಮ ಉಲ್ಲಂಘಿಸಿದ್ದಕ್ಕಾಗಿ ಜಪ್ತಿ ಮಾಡಲಾದ ವಾಹನಗಳ ಮಾಲೀಕರು, ಸಂಚಾರ ನಿಯಮ ಉಲ್ಲಂಘನೆಗೂ ದಂಡ ಕಟ್ಟುತ್ತಿದ್ದಾರೆ.

ವಾಹನಗಳ ಮೇಲೆ‌ ಇದ್ದ ಹಳೆಯ ಸಂಚಾರ ನಿಯಮ ಉಲ್ಲಂಘನೆ ದಂಡ ಸಂಗ್ರಹಿಸುತ್ತಿರುವ ಸಂಚಾರ ಪೊಲೀಸರು. ಇದುವರೆಗೂ 94.97 ಲಕ್ಷ ದಂಡ ಸಂಗ್ರಹಿಸಲಾಗಿದೆ.

ಬಿಡುಗಡೆ ಮಾಡಲಾದ 10,537 ವಾಹನಗಳ ಮೇಲೆ ಇದ್ದ ಒಟ್ಟು 39,002 ಸಂಚಾರ ಉಲ್ಲಂಘನೆ ಪ್ರಕರಣಗಳು.

ADVERTISEMENT

ಹಳೆಯ ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿ ಮಾಡಿದ ಬಳಿಕವೇ ಲಾಕ್‌ಡೌನ್ ವೇಳೆ ಜಪ್ತಿಯಾದ ವಾಹನ ಬಿಡುಗಡೆ ಮಾಡಲಾಗಿದೆ. ಮೇ 1 ರಿಂದ ದಂಡ ಸಂಗ್ರಹ ಮಾಡಿ ವಾಹನಗಳ ಬಿಡುಗಡೆ ಮಾಡಲಾಗುತ್ತದೆ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ರವಿಕಾಂತೇಗೌಡ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.