ADVERTISEMENT

ಲೂಪ್‌ ಲೈನ್‌ನಲ್ಲಿ ರೈಲಿನ ವೇಗ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 10 ಜನವರಿ 2019, 20:28 IST
Last Updated 10 ಜನವರಿ 2019, 20:28 IST

ಹುಬ್ಬಳ್ಳಿ: ನೈರುತ್ಯ ರೈಲ್ವೆಯು 62 ನಿಲ್ದಾಣಗಳ ಲೂಪ್‌ಲೈನ್‌ನಲ್ಲಿ (ನಿಲ್ದಾಣದಲ್ಲಿನ ಕ್ರಾಸಿಂಗ್‌ ಟ್ರ್ಯಾಕ್‌) ರೈಲುಗಳ ವೇಗದ ಮಿತಿ ಹೆಚ್ಚಿಸಿದೆ.

ಲೂಪ್‌ಲೈನ್‌ನಲ್ಲಿ ರೈಲು ಮೊದಲು ಗಂಟೆಗೆ 15 ಕಿ.ಮೀ ವೇಗದಲ್ಲಿ ಚಲಿಸುತ್ತಿತ್ತು. ಈಗ ಅದನ್ನು ಗಂಟೆಗೆ 30 ಕಿ.ಮೀ ವೇಗದಲ್ಲಿ ಚಲಿಸುವ ಹಾಗೆ ಮೂಲಸೌಲಭ್ಯ ಅಭಿವೃದ್ಧಿ ಮಾಡಲಾಗಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

ಅರಸೀಕೆರೆ– ಚಿಕ್ಕಜಾಜೂರು (11 ನಿಲ್ದಾಣ), ಯಶವಂತಪುರ– ಒಮಲೂರು (13), ಯಶವಂತಪುರ– ತುಮಕೂರು (6), ರಾಮನಗರ– ಮೈಸೂರು (10), ಹೊಸಪೇಟೆ– ಬಳ್ಳಾರಿ (8) ಮತ್ತು ದಾವಣಗೆರೆ– ಹುಬ್ಬಳ್ಳಿ (14) ನಡುವಿನ ನಿಲ್ದಾಣಗಳಲ್ಲಿ ವೇಗದ ಮಿತಿ ಹೆಚ್ಚಿಸಲಾಗಿದೆ.

ADVERTISEMENT

‘ಉಳಿದ ನಿಲ್ದಾಣಗಳಲ್ಲಿಯೂ ವೇಗದ ಮಿತಿ ಹೆಚ್ಚಿಸುವ ಕಾರ್ಯ ಪ್ರಗತಿಯಲ್ಲಿದೆ. ಇದರಿಂದ ರೈಲುಗಳ ವೇಗ ಹೆಚ್ಚಾಗುತ್ತದೆ’ ಎಂದು ನೈರುತ್ಯ ರೈಲ್ವೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.