ADVERTISEMENT

ಅನುವಾದ ನಿರ್ಲಕ್ಷ್ಯಿತ ಕ್ಷೇತ್ರ: ಅನುವಾದಕ ಸುಭಾಷ್ ರಾಜಮಾನೆ ಬೇಸರ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2024, 15:45 IST
Last Updated 10 ಆಗಸ್ಟ್ 2024, 15:45 IST
<div class="paragraphs"><p>ಸಾಂಕೇತಿಕ ಚಿತ್ರ&nbsp;</p></div>

ಸಾಂಕೇತಿಕ ಚಿತ್ರ 

   

ಬೆಂಗಳೂರು: ‘ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಅತ್ಯಂತ ನಿರ್ಲಕ್ಷ್ಯಕ್ಕೆ ಗುರಿಯಾದ ಕ್ಷೇತ್ರ ಅನುವಾದ’ ಎಂದು ಅನುವಾದಕ ಸುಭಾಷ್ ರಾಜಮಾನೆ ಬೇಸರಿಸಿದರು.

ಬುಕ್‌ ಬ್ರಹ್ಮ ಸಾಹಿತ್ಯ ಉತ್ಸವದಲ್ಲಿ ‘ಅನುವಾದದ ಒಳಹೊರಗು’ ಗೋಷ್ಠಿಯನ್ನು ನಡೆಸಿಕೊಟ್ಟ ಅವರು, ‘ಕನ್ನಡದಲ್ಲಿ ಅನುವಾದ ಸಾಹಿತ್ಯದ ಅಧ್ಯಯನವೇ ನಡೆದಿಲ್ಲ’ ಎಂದು ಕನ್ನಡದ ಅನುವಾದಕರನ್ನು ಈ ಸಂಬಂಧ ಚರ್ಚೆಗೆ ಎಳೆದರು.

ADVERTISEMENT

ಸಾಹಿತಿ ಚಂದ್ರಕಾಂತ ಪೋಕಳೆ ಮೇಲಿನ ಮಾತನ್ನು ಅನುಮೋದಿಸುತ್ತಲೇ, ‘ಮೂಲ ಭಾಷೆಯಲ್ಲಿರುವ ಸೊಗಡು, ಶಕ್ತಿಯನ್ನು ಉದ್ದೇಶಿತ ಭಾಷೆಗೂ ತೆಗೆದುಕೊಂಡು ಹೋಗುವುದು ದೊಡ್ಡ ಸವಾಲು. ಕುಸುಮಬಾಲೆಯನ್ನು ಮರಾಠಿಗೆ ಅನುವಾದಿಸುವಾಗ ಗ್ರಾಂಥಿಕ ಭಾಷೆ ಬಳಸಬೇಕಾಯಿತು. ಅನುವಾದದಲ್ಲಿನ ಇಂತಹ ಸವಾಲುಗಳ ಬಗ್ಗೆ ಚರ್ಚೆ ನಡೆಯುವುದೇ ಇಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.