ADVERTISEMENT

ಸಾರಿಗೆ ನೌಕರರ ಮುಷ್ಕರ: ಮತ್ತೊಂದು ಸುತ್ತಿನ‌ ಮಾತುಕತೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2020, 10:07 IST
Last Updated 13 ಡಿಸೆಂಬರ್ 2020, 10:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಮುಷ್ಕರನಿರತ ಸಾರಿಗೆ ನಿಗಮಗಳ ನೌಕರರ ಮನವೊಲಿಕೆಗೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮತ್ತೊಂದು ಸುತ್ತಿನ ಸಭೆ ಆರಂಭಿಸಿದ್ದಾರೆ.

ನಾಲ್ಕು ಕಾರ್ಮಿಕ ಸಂಘಟನೆಗಳ ಮುಖಂಡರ ಜತೆ ಸಾರಿಗೆ ನೌಕರರ ಕೂಟದ ಮುಖಂಡರನ್ನೂ ಸಭೆಗೆ ಆಹ್ವಾನಿಸಲಾಗಿದೆ.‌ ನೌಕರರ ಬೇಡಿಕೆ ಮತ್ತು ಸರ್ಕಾರ ಕೈಗೊಂಡಿರುವ ನಿರ್ಧಾರಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ.

ಮಾತುಕತೆ ಕುರಿತು ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಕ್ರಿಯಿಸಿದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, 'ಎಲ್ಲ ಬೇಡಿಕೆ ಒಪ್ಪಿದರೆ ಮಾತ್ರ ಮುಷ್ಕರ ಕೈಬಿಡುವ ಕುರಿತು ತೀರ್ಮಾನಿಸಲಾಗುವುದು‌. ಇಲ್ಲವಾದೃ ಹೋರಾಟ ಮುಂದುವರಿಯಲಿದೆ' ಎಂದರು.

ADVERTISEMENT

ಸರ್ಕಾರದ ಮುಂದೆ ಹತ್ತು ಬೇಡಿಕೆಗಳನ್ನು ಇಡಲಾಗಿದೆ. ಸರ್ಕಾರಿ ನೌಕರರು ಎಂದು ಪರಿಗಣಿಸುವ ಬೇಡಿಕೆ ಹೊರತಾಗಿ ಒಂಭತ್ತು ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಸಿದ್ಧವಾಗಿದೆ ಎಂಬ‌ ಮಾಹಿತಿ ಬಂದಿದೆ. ಮೊದಲನೇ ಬೇಡಿಕೆಯನ್ನು ಬದಿಗಿಟ್ಟು ನಿರ್ಧಾರ ಕೈಗೊಳ್ಳುವುದಕ್ಕೆ ನೌಕರರ ಸಹಮತ ಇಲ್ಲ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.