ADVERTISEMENT

ಗೋಕರ್ಣ: ಗುಡ್ಡದ ದುರ್ಗಮ ಪ್ರದೇಶದಲ್ಲಿ ನೆಲೆಸಿದ್ದ ವಿದೇಶಿಗರ ತೆರವು

‘ಪ್ರಜಾವಾಣಿ’ ವರದಿ ಫಲಶ್ರುತಿ

​ಪ್ರಜಾವಾಣಿ ವಾರ್ತೆ
Published 7 ಮೇ 2020, 13:35 IST
Last Updated 7 ಮೇ 2020, 13:35 IST
ಗೋಕರ್ಣ ಮತ್ತು ಕುಡ್ಲೆ ಬೀಚ್ ಮಧ್ಯದಲ್ಲಿರುವ ಜಟಾಯು ತೀರ್ಥದ ಪಕ್ಕದ ಬಲ್ಲಾಳ ತೀರ್ಥದ ದುರ್ಗಮ ಪ್ರದೇಶದಲ್ಲಿ ಗುಹೆಯೊಂದರಲ್ಲಿ ನೆಲೆಸಿದ್ದ ವಿದೇಶಿ ಪ್ರವಾಸಿಗನನ್ನು ಪೊಲೀಸರು ಬುಧವಾರ ತೆರವುಗೊಳಿಸಿದರು
ಗೋಕರ್ಣ ಮತ್ತು ಕುಡ್ಲೆ ಬೀಚ್ ಮಧ್ಯದಲ್ಲಿರುವ ಜಟಾಯು ತೀರ್ಥದ ಪಕ್ಕದ ಬಲ್ಲಾಳ ತೀರ್ಥದ ದುರ್ಗಮ ಪ್ರದೇಶದಲ್ಲಿ ಗುಹೆಯೊಂದರಲ್ಲಿ ನೆಲೆಸಿದ್ದ ವಿದೇಶಿ ಪ್ರವಾಸಿಗನನ್ನು ಪೊಲೀಸರು ಬುಧವಾರ ತೆರವುಗೊಳಿಸಿದರು   

ಗೋಕರ್ಣ: ಇಲ್ಲಿಯ ಬಲ್ಲಾಳ ತೀರ್ಥದ ದುರ್ಗಮ ಪ್ರದೇಶದ ಗುಹೆಯೊಂದರಲ್ಲಿ ನೆಲೆಸಿದ್ದ ವಿದೇಶಿ ಪ್ರಜೆ ಹಾಗೂ ಪಕ್ಕದಲ್ಲಿ ಟೆಂಟ್ ಹಾಕಿಕೊಂಡು ವಾಸಿಸುತ್ತಿದ್ದ ಮತ್ತೊಬ್ಬ ವಿದೇಶಿಗನನ್ನು ಪೊಲೀಸರು ಬುಧವಾರ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದ್ದಾರೆ.

ಮೇನ್ ಬೀಚ್ ಮತ್ತು ಕುಡ್ಲೆ ಬೀಚ್ ಮಧ್ಯದಲ್ಲಿರುವ ಜಟಾಯು ತೀರ್ಥದ ಬಳಿ ಇಬ್ಬರೂ ಹಲವು ದಿನಗಳಿಂದ ವಾಸವಿದ್ದರು. ಪಿಎಸ್‌ಐನವೀನ ನಾಯ್ಕ ತಮ್ಮ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ಸತತ ಎರಡು ಗಂಟೆ ಕಾರ್ಯಾಚರಣೆ ನಡೆಸಿದರು. ಬಳಿಕ ಇಬ್ಬರನ್ನೂ ಸುರಕ್ಷಿತ ಸ್ಥಳಕ್ಕೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರಿಬ್ಬರೂ ರಷ್ಯನ್ನರುಎಂದು ತಿಳಿದು ಬಂದಿದೆ.

ಈ ಬಗ್ಗೆ ಎರಡು ದಿನಗಳ ಹಿಂದೆ ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು. ವರದಿಯಿಂದ ಎಚ್ಚೆತ್ತ ಪೊಲೀಸರು ಆ ದುರ್ಗಮ ಪ್ರದೇಶವನ್ನು ಪತ್ತೆ ಹಚ್ಚಿ ವಿದೇಶಿಗರ ತೆರವು ಕಾರ್ಯಾಚರಣೆ ಕೈಗೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.