ADVERTISEMENT

ಕಲಬುರ್ಗಿಗೆ ರೈಲ್ವೆ ವಲಯ: ಇನ್ನೂ ಪ್ರಕ್ರಿಯೆ ಆರಂಭವಾಗಿಲ್ಲ ಎಂದ ಉಮೇಶ ಜಾಧವ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2019, 11:35 IST
Last Updated 29 ಆಗಸ್ಟ್ 2019, 11:35 IST
   

ಕಲಬುರ್ಗಿ:ಪ್ರತ್ಯೇಕ ರೈಲ್ವೆ ವಲಯ ಆರಂಭಿಸುವ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ ಎಂದು ಕಲಬುರ್ಗಿ ಕ್ಷೇತ್ರದ ‌ಸಂಸದ ಡಾ.ಉಮೇಶ ಜಾಧವ್ ಹೇಳಿದರು.

ಮಲ್ಲಿಕಾರ್ಜುನ ಖರ್ಗೆ ಅವರು ರೈಲ್ವೆಸಚಿವರಾಗಿದ್ದ ಸಂದರ್ಭದಲ್ಲಿ ಪ್ರತ್ಯೇಕ ವಲಯ ಘೋಷಿಸಿದ್ದರು. ನಂತರ ‌ಅದುನನೆಗುದಿಗೆ ಬಿದ್ದಿತ್ತು. ಸಂಸದರಾಗಿ ಆಯ್ಕೆ ಆದ ಬಳಿಕ ವಲಯ ರಚನೆ ಪ್ರಕ್ರಿಯೆಗೆ ವೇಗ ನೀಡುವುದಾಗಿ ಜಾಧವ ‌ಹೇಳಿದ್ದರು.

ರೈಲು ನಿಲ್ದಾಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಕಲಬುರ್ಗಿ ವಲಯ ರಚನೆ ಪ್ರಕ್ರಿಯೆ ಇನ್ನೂ ಶುರುವೇ ಆಗಿಲ್ಲ ಎಂದರು.

ADVERTISEMENT

ಆ‌ ಬಗ್ಗೆ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರ ಮೇಲೆ ಒತ್ತಡ ಹೇರುವಿರಾ ಎಂಬ ಪ್ರಶ್ನೆಗೂ ಅವರು ನಿರ್ದಿಷ್ಟ ಉತ್ತರ ನೀಡಲಿಲ್ಲ.

ಖರ್ಗೆ ಅವರು ಸಚಿವರಾಗಿದ್ದ ಸಂದರ್ಭದಲ್ಲಿ ವಲಯ ರಚನೆಗೆ ಅಡಿಗಲ್ಲು ಹಾಕಿದ್ದರು. ₹ 10 ಕೋಟಿ ಅನುದಾನವನ್ನೂ ಮೀಸಲಿಟ್ಟಿದ್ದರು. ಆದರೆ ಕೇಂದ್ರದ ಯುಪಿಎ ಸರ್ಕಾರ ಅಧಿಕಾರ ಕಳೆದುಕೊಂಡ ಬಳಿಕ ಆ ಹಣ ಬಿಡುಗಡೆಯಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.