ADVERTISEMENT

ಅನಧಿಕೃತ ನೀರು ಸಂಪರ್ಕ:ಸಕ್ರಮಕ್ಕೆ ಅವಕಾಶ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2022, 18:56 IST
Last Updated 25 ಏಪ್ರಿಲ್ 2022, 18:56 IST
ಜಲಮಂಡಳಿ ಲೋಗೊ
ಜಲಮಂಡಳಿ ಲೋಗೊ   

ಬೆಂಗಳೂರು: ಅನಧಿಕೃತವಾಗಿ ನೀರು ಮತ್ತು ಒಳಚರಂಡಿ ಸಂಪರ್ಕ ಪಡೆದಿರುವವರು ಖುದ್ದಾಗಿ ಮಾಹಿತಿ ನೀಡಿ ಸಕ್ರಮಗೊಳಿಸಿಕೊಳ್ಳಬೇಕು ಎಂದು ಜಲಮಂಡಳಿ ಸೂಚಿಸಿದೆ.

ಅನಧಿಕೃತ ನೀರು ಮತ್ತು ಒಳಚರಂಡಿ ಸಂಪರ್ಕಗಳ ಬಗ್ಗೆ ತಪಾಸಣೆ ನಡೆಸಲಾಗುತ್ತಿದೆ. ತಪಾಸಣೆಯ ವೇಳೆ
ಯಲ್ಲಿ ಮಂಡಳಿಯ ಪೂರ್ವ ಮತ್ತು ಪಶ್ಚಿಮ ವಲಯದ ಮುಖ್ಯ ಎಂಜಿನಿಯರ್‌ ಅವರು ಒಟ್ಟು 53,865 ಅನಧಿಕೃತ ನೀರು ಮತ್ತು ಒಳಚರಂಡಿ ಸಂಪರ್ಕಗಳನ್ನು ಪತ್ತೆ ಮಾಡಿದ್ದಾರೆ.

ಈ ರೀತಿ ಅನಧಿಕೃತ ಸಂಪರ್ಕ ಪಡೆದಿರುವುದು ಕಾನೂನು ಬಾಹಿರವಾಗಿದೆ. ಇವರ ವಿರುದ್ಧ ಮಂಡಳಿಯ ಕಾಯ್ದೆ 1964ರ ಸೆಕ್ಷನ್ -108 (ಎ) ಪ್ರಕಾರ ಕಾನೂನು ರೀತಿ ಕ್ರಮಕೈಗೊಳ್ಳಲಾಗಿದೆ.

ADVERTISEMENT

ಅನಧಿಕೃತ ನೀರಿನ ಸಂಪರ್ಕ ಪಡೆದಿರುವುದನ್ನು ಪತ್ತೆ ಮಾಡಲು ಉಪವಿಭಾಗಗಳ ಮಟ್ಟದಲ್ಲಿ ತಂಡಗಳನ್ನು ರಚಿಸಲಾಗಿದೆ. ತಪಾಸಣೆಯ ವೇಳೆಯಲ್ಲಿ ಅನಧಿಕೃತ ನೀರು ಮತ್ತು ಒಳಚರಂಡಿ ಸಂಪರ್ಕಗಳು ಕಂಡುಬಂದಲ್ಲಿ ದಂಡ ವಿಧಿಸುವುದರ ಜೊತೆಗೆ ಸೆಕ್ಷನ್ -108(ಎ)
ಪ್ರಕಾರ ಮೂರು ವರ್ಷ ಕಾರಾಗೃಹ
ಶಿಕ್ಷೆ ಅಥವಾ ದಂಡ ಅಥವಾ ಕಾರಾಗೃಹ ಶಿಕ್ಷೆ ಮತ್ತು ದಂಡ ಎರಡನ್ನು ವಿಧಿಸುವ ಅವಕಾಶವಿದೆ. ಹೀಗಾಗಿ, ಕಾನೂನಿನ ಅನ್ವಯ ಕ್ರಮಕೈಗೊಳ್ಳಲಾಗುವುದು ಎಂದು ಜಲಮಂಡಳಿಯ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.

ಸಾರ್ವಜನಿಕರು ಅನಧಿಕೃತ ಸಂಪರ್ಕಗಳನ್ನು ತೆಗೆದುಕೊಂಡಿರುವವರ ಮಾಹಿತಿ
ಯನ್ನು ಮಂಡಳಿಯ 24x7 ಸಹಾಯವಾಣಿ- 1916ಗೆ ಕರೆಮಾಡಿ ಮಾಹಿತಿ ನೀಡಬಹುದು. ಜತೆಗೆ, ಉಪವಿಭಾಗದ ಕಚೇರಿಗಳಲ್ಲಿನದೂರು ಪೆಟ್ಟಿಗೆಯಲ್ಲಿ ಪತ್ರಗಳ ಮೂಲಕವೂ ಸಹ ದೂರುಗಳನ್ನು
ಸಲ್ಲಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

ಮಂಡಳಿಯು ಮಾಹಿತಿದಾರರ ವಿವರಗಳನ್ನು ಗೋಪ್ಯವಾಗಿಇರಿಸಲಿದೆ. ನೀರಿನ ಸಂಪರ್ಕ ಹಾಗೂ ಅನಧಿಕೃತ ಸಂಪರ್ಕಗಳನ್ನು ಪಡೆದವರ ವಿರುದ್ಧ ಮಂಡಳಿಯು ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳಲಿದೆ. ಆದ್ದರಿಂದ ಗ್ರಾಹಕರು ಇದಕ್ಕೆಅವಕಾಶ ನೀಡದೆ ಕೊಡದೆ, ಖುದ್ದಾಗಿ ಮಂಡಳಿಗೆ ಮಾಹಿತಿ ನೀಡಿಸಕ್ರಮಗೊಳಿಸಿಕೊಳ್ಳಬೇಕು ಎಂದು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.