ADVERTISEMENT

ಒಂದು ಮತದ ಅಂತರದಲ್ಲಿ ಸೋತು ಗೆದ್ದವರು!

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2018, 4:09 IST
Last Updated 3 ಸೆಪ್ಟೆಂಬರ್ 2018, 4:09 IST
   

ಬಳ್ಳಾರಿ: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಹಲವು ಕುತೂಹಲಗಳಿಗೆ ಸಾಕ್ಷಿಯಾಗಿದೆ. ಬಿಜೆಪಿ ಅಭ್ಯರ್ಥಿಗಳಿಗೆ ಒಂದು ಮತದ ಅಂತರ ಒಂದು ಕಡೆ ಗೆಲುವು, ಮತ್ತೊಂದು ಕಡೆ ಸೋಲಿನ ಕಹಿ ಉಣಿಸಿದೆ.

ಕುಡುತಿನಿ ಪಟ್ಟಣ ಪಂಚಾಯ್ತಿಯ 5ನೇ ವಾರ್ಡಿನ ಬಿಜೆಪಿ ಅಭ್ಯರ್ಥಿ ಕೆ.ಎಂ ‌ಹಾಲಪ್ಪ ಒಂದು ಮತದ ಅಂತರದಿಂದ ಗೆಲುವು ಸಾಧಿಸಿದರು. ಅವರು 281 ಮತ ಗಳಿಸಿದರೆ, ಸಮೀಪ ಸ್ಪರ್ಧಿ ಕಾಂಗ್ರೆಸ್‌ನ ಬಿ.ಸ್ವಾಮಿ 280 ಮತ ಪಡೆದರು.

(ಬಿಜೆಪಿ ಅಭ್ಯರ್ಥಿ ಕೆ.ಎಂ ‌ಹಾಲಪ್ಪ)

ADVERTISEMENT

ಬೀದರ್‌ನ ಹುಮನಾಬಾದ್ ತಾಲ್ಲೂಕಿನ ಹಳ್ಳಿಖೇಡ್ ಪುರಸಭೆ ಚುನಾವಣೆಯಲ್ಲಿಯೂ ಇಂಥದ್ದೇ ಸಂದರ್ಭ ದಾಖಲಾಗಿದೆ. ವಾರ್ಡ್ ನಂ 21ರ ಕಾಂಗೆಸ್ ಅಭ್ಯರ್ಥಿ ಹುರ್ಮತ್ ಬೇಗಂ ಒಂದು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಹುರ್ಮತ್ ಬೇಗಂ 121 ಮತ ಪಡೆದರೆ, ಬಿಜೆಪಿ ಅಭ್ಯರ್ಥಿ ವಿಜಯಲಕ್ಷ್ಮಿ ನೆಹರು 120 ಮತಗಳನ್ನು ಪಡೆದು ಗೆಲುವಿನ ಗಡಿಯಲ್ಲಿ ನಿಂತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.