ADVERTISEMENT

ನಾಲ್ಕನೇ ಅಲೆಗೂ ಲಸಿಕೆಯೇ ಮದ್ದು: ಡಾ.ಕೆ.ಸುಧಾಕರ್‌ 

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2022, 16:36 IST
Last Updated 12 ಏಪ್ರಿಲ್ 2022, 16:36 IST
ಡಾ.ಕೆ.ಸುಧಾಕರ್‌ 
ಡಾ.ಕೆ.ಸುಧಾಕರ್‌    

ಬೆಂಗಳೂರು: ಕೋವಿಡ್‌ ನಾಲ್ಕನೇ ಅಲೆಯಿಂದ ಹಾನಿ ತಡೆಯುವುದಕ್ಕೂ ಲಸಿಕೆಯೇ ಮದ್ದು, ಬೇರೆ ಮಾರ್ಗಗಳಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಹೇಳಿದರು.

ಬಿಜೆಪಿ ರಾಜ್ಯ ಘಟಕದ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೋವಿಡ್‌ ಇನ್ನೂ ಸಂಪೂರ್ಣವಾಗಿ ಅಂತ್ಯವಾಗಿಲ್ಲ. ಹೊಸ ತಳಿಯ ರೂಪಾಂತರಿ ವೈರಾಣುಗಳು ಬರುತ್ತಲೇ ಇವೆ. ಸರ್ಕಾರವೇ ಉಚಿತವಾಗಿ ಲಸಿಕೆ ನೀಡುತ್ತಿದೆ. ಎಲ್ಲರೂ ಸಕಾಲಕ್ಕೆ ಲಸಿಕೆ ಪಡೆಯುವ ಮೂಲಕ ಕೋವಿಡ್‌ ವಿರುದ್ಧದ ಹೋರಾಟಕ್ಕೆ ಬಲ ತುಂಬಬೇಕು’ ಎಂದರು.

ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ಫಲವಾಗಿ ಈವರೆಗೆ ದೇಶದ ಜನರಿಗೆ 185.90 ಕೋಟಿ ಡೋಸ್‌ ಲಸಿಕೆ ನೀಡಲು ಸಾಧ್ಯವಾಗಿದೆ. ರಾಜ್ಯದಲ್ಲಿ ಈವರೆಗೆ 10.54 ಕೋಟಿ ಡೋಸ್‌ ಕೋವಿಡ್‌ ಲಸಿಕೆಗಳನ್ನು ನೀಡಲಾಗಿದೆ. ಮುನ್ನೆಚ್ಚರಿಕೆ ಡೋಸ್‌ ಪಡೆಯುವುದಕ್ಕೆ ಹೆಚ್ಚಿನ ಜನರು ಮುಂದಾಗಬೇಕು ಎಂದು ಹೇಳಿದರು.

ADVERTISEMENT

ಸಾಂಕ್ರಾಮಿಕ ರೋಗಗಳು ಬಂದಾಗ ಆಡಳಿತ ಮತ್ತು ವಿರೋಧ ಪಕ್ಷಗಳು ಒಗ್ಗೂಡಿ ಕೆಲಸ ಮಾಡಬೇಕು. ಆದರೆ, ಕೋವಿಡ್‌ ಎದುರಿಸುವ ವಿಚಾರದಲ್ಲಿ ವಿರೋಧ ‍ಪಕ್ಷಗಳಿಂದ ಸರಿಯಾದ ಸಹಕಾರ ದೊರಕಲಿಲ್ಲ. ಲಸಿಕೆ ವಿಚಾರದಲ್ಲೇ ರಾಜಕಾರಣ ಮಾಡಿದರು. ವಿರೋಧ ಪಕ್ಷಗಳ ಅಸಹಕಾರ ಮತ್ತು ಅವಿಶ್ವಾಸದ ನಡೆಯನ್ನು ಸಾರ್ವಜನಿಕರು ಗಮನಿಸಿದ್ದಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.