ADVERTISEMENT

ತಿಗಳರು ವಹ್ನಿಕುಲ ಕ್ಷತ್ರಿಯ ಎಂದೇ ಬರೆಯಿಸಿ: ತಿಗಳರ ಸಂಘ ಕರೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 15:36 IST
Last Updated 20 ಸೆಪ್ಟೆಂಬರ್ 2025, 15:36 IST
<div class="paragraphs"><p> ಜಾತಿ ಸಮೀಕ್ಷೆ </p></div>

ಜಾತಿ ಸಮೀಕ್ಷೆ

   

ಬೆಂಗಳೂರು: ‘ತಿಗಳ ಮತ್ತು ತಿಗಳ ಸಂಬಂಧಿ ಜಾತಿಗಳ ಜನರು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ತಮ್ಮ ಜಾತಿಯನ್ನು ‘ವನ್ನಿಕುಲ/ವಹ್ನಿಕುಲ ಕ್ಷತ್ರಿಯ’ ಎಂದೇ ಬರೆಯಿಸಬೇಕು ಎಂದು ಕರ್ನಾಟಕ ರಾಜ್ಯ ತಿಗಳರ (ವಹ್ನಿಕುಲ ಕ್ಷಿತ್ರಿಯರ) ಸಂಘ ಕರೆ ನೀಡಿದೆ.

ಸಂಘದ ಅಧ್ಯಕ್ಷ ಮು.ಕೃಷ್ಣಮೂರ್ತಿ, ಕಾರ್ಯದರ್ಶಿ ಬಿ.ಎಸ್‌.ಶ್ರೀಧರ್‌ ಅವರು ಸಂಘದ ವತಿಯಿಂದ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

ADVERTISEMENT

‘ಧರ್ಮರಾಜ ಕಾಪು, ಪಡೆಯಾಚಿ, ಪಡೆಯಾಚಿ ಗೌಡ, ಪಡೆಯಾಚಿ ಗೌಂಡರು, ಪಳ್ಳಿ, ಪಳ್ಳಿ ಗೌಂಡರು, ಪಳ್ಳಿ ಕಾಪು, ಪಳ್ಳಿರೆಡ್ಡಿಯಾರ್‌, ವಹ್ನಿಕುಲ, ವನ್ನಿಕುಲ/ವಹ್ನಿಕುಲ ಕ್ಷತ್ರಿಯ, ವನ್ನೇರು ಕ್ಷತ್ರಿಯ, ವನ್ನಿಯರ್‌, ವನ್ನಿಕುಲ ಕ್ಷತ್ರಿಯ, ವಣ್ಣ್ಇಯ, ವಣ್ಣಿಯ ಗೌಂಡರು, ವಣ್ಣಿಯ ಕಾಪು, ವಣ್ಣಿಯ ಕುಲ ಗೌಂಡರ್‌, ವನ್ನಿಯಕುಲ/ವಣ್ಣಿಯ ಕುಲ ಕ್ಷತ್ರಿಯ, ವಣ್ಣಿಯ ಪಿಳ್ಳೆ, ವಣ್ಣಿಯ ರೆಡ್ಡಿಯಾರ್ ಮತ್ತು ವಣ್ಣಿಯ ಕುಲ ಎಂಬ ಉಪಜಾತಿಗಳನ್ನು ಸಮೀಕ್ಷೆಯ ಕೈಪಿಡಿಯಲ್ಲಿ ಪ್ರತ್ಯೇಕವಾಗಿ ತೋರಿಸಲಾಗಿದೆ. ಆದರೆ ಇವೆಲ್ಲವೂ ತಿಗಳ ಸಂಬಂಧಿ ಜಾತಿಗಳು’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

‘ಹಿಂದುಳಿದ ವರ್ಗಗಳ ಆಯೋಗವು ನಮ್ಮ ಸಂಘವನ್ನು ದೃಢೀಕರಿಸುವಾಗ ಈ ಎಲ್ಲ ಜಾತಿಗಳನ್ನು ‘ತಿಗಳ’ ಜಾತಿಯ ಅಡಿಯಲ್ಲಿ ಪರಿಗಣಿಸಿದೆ. ವಹ್ನಿಕುಲ ಕ್ಷತ್ರಿಯ ಎಂಬುದು ಪಾರಂಪರಿಕ ಹೆಸರಾದರೂ, ತಿಗಳ ಎಂಬ ಹೆಸರು ಬಳಕೆಯಲ್ಲಿದೆ. ಹೀಗಾಗಿ ಸಮುದಾಯದ ಎಲ್ಲ ಜನರೂ ಕ್ರಮ ಸಂಖ್ಯೆ 1508ರಲ್ಲಿ ಜಾತಿಯ ಹೆಸರನ್ನು ‘ವನ್ನಿಕುಲ/ವಹ್ನಿಕುಲ ಕ್ಷತ್ರಿಯ’ ಎಂದು ಬರೆಯಿಸಬೇಕು. ಉಪಜಾತಿಗಳ ಕಾಲಂನಲ್ಲಿ, ಉಪಜಾತಿಗಳ ಹೆಸರು ಬರೆಯಿಸಬೇಕು’ ಎಂದು ಕೋರಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.