ADVERTISEMENT

ಡಾ.ಸುದರ್ಶನ್‌ಗೆ ‘ರಾಷ್ಟ್ರೀಯ ವೈದ್ಯಶ್ರೀ’ ಪ‍್ರಶಸ್ತಿ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2021, 20:20 IST
Last Updated 22 ಡಿಸೆಂಬರ್ 2021, 20:20 IST
ಡಾ.ಸುದರ್ಶನ್‌
ಡಾ.ಸುದರ್ಶನ್‌   

ಕಲಬುರಗಿ: ಇಲ್ಲಿನ ಡಾ. ಪಿ.ಎಸ್‌.ಶಂಕರ ಪ್ರತಿಷ್ಠಾನ ನೀಡುವ ‘ಡಾ. ಪಿ.ಎಸ್.ಶಂಕರ ರಾಷ್ಟ್ರೀಯ ವೈದ್ಯಶ್ರೀ’ ಪ್ರಶಸ್ತಿಗೆ ಕೋವಿಡ್‌–19 ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ. ಎಂ.ಕೆ.ಸುದರ್ಶನ್‌ ಆಯ್ಕೆಯಾಗಿದ್ದಾರೆ.

ಮಂಗಳೂರಿನ ದಂತವೈದ್ಯ ಡಾ.ಮುರಳಿಮೋಹನ ಚೂಂತಾರು ಅವರನ್ನು ‘ಡಾ.ಪಿ.ಎಸ್‌. ಶಂಕರ ಶ್ರೇಷ್ಠ ವೈದ್ಯ ಸಾಹಿತ್ಯ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಎರಡೂ ಪ್ರಶಸ್ತಿಗಳನ್ನು2022ರ ಜನವರಿ 1ರಂದು ನಗರದಲ್ಲಿ ನಡೆಯುವ ಡಾ.ಪಿ.ಎಸ್‌. ಶಂಕರ ಅವರ ಜನ್ಮದಿನಾಚರಣೆ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು ಎಂದು ಪ‍್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಬಡಶೇಶಿ ತಿಳಿಸಿದ್ದಾರೆ.

ಬೆಂಗಳೂರಿನ ಕೆಂಪೇಗೌಡ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕರೂ ಆದ ಡಾ.ಸುದರ್ಶನ್‌ ಅವರು ಕೋವಿಡ್‌ ನಿಯಂತ್ರಣದಲ್ಲಿ ಪ್ರಧಾನ ಪಾತ್ರ ವಹಿಸಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಸದಸ್ಯರೂ ಆಗಿದ್ದ ಅವರು, ರೇಬಿಸ್ ನಿಯಂತ್ರಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಅವರ ಜೀವಮಾನದ ಸಾಧನೆ ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ADVERTISEMENT

ಡಾ.ಮುರಳಿಮೋಹನ್‌ ಅವರು ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ 15 ಕೃತಿಗಳನ್ನು ಕನ್ನಡದಲ್ಲಿ ಬರೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅವರು ಕೈಗೊಂಡ ಗ್ರಂಥಾಲಯ ಚಟುವಟಿಕೆಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.