ADVERTISEMENT

ವೀರಪ್ಪ ಮೊಯಿಲಿ ಆತ್ಮಕಥನ ‘ನನ್ನ ಬೊಗಸೆಯ ಆಕಾಶ’ ಕೃತಿ ಮಾ.12ಕ್ಕೆ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2022, 9:43 IST
Last Updated 9 ಮಾರ್ಚ್ 2022, 9:43 IST
ವೀರಪ್ಪ ಮೊಯಿಲಿ
ವೀರಪ್ಪ ಮೊಯಿಲಿ   

ಬೆಂಗಳೂರು: ಕಾಂಗ್ರೆಸ್‌ ಮುಖಂಡ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರ ಆತ್ಮಕಥನ ‘ನನ್ನ ಬೊಗಸೆಯ ಆಕಾಶ‘ ಕೃತಿ ಇದೇ 12ರಂದು ಲೋಕಾರ್ಪಣೆ ಆಗಲಿದೆ. ರವೀಂದ್ರ ಕಲಾಕ್ಷೇತ್ರದಲ್ಲಿ ಅಂದು ಸಂಜೆ 4 ಗಂಟೆಗೆ ಶಾಸಕ ಜಿ. ಪರಮೇಶ್ವರ ಈ ಕೃತಿಯನ್ನು ಬಿಡುಗಡೆ ಮಾಡಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮೊಯಿಲಿ, ‘ನನ್ನ ಬೊಗಸೆಯ ಆಕಾಶ’ ಪುಸ್ತಕವನ್ನು 12ರಂದು ಜಾಗತಿಕ ಲೋಕಕ್ಕೆ ನೀಡುತ್ತೇನೆ. ಹಾಗೆಂದು, ಇದನ್ನು ರಸವತ್ತಾಗಿ ಬರೆದಿಲ್ಲ. ವಾಸ್ತವಾಂಶದಿಂದ ಬರೆದಿದ್ದೇನೆ. ಬರಗೂರು ರಾಮಚಂದ್ರಪ್ಪ ಮುನ್ನುಡಿ ಬರೆದಿದ್ದಾರೆ’ ಎಂದರು.

‘ಮುಖ್ಯಮಂತ್ರಿ ಆದ ಕ್ಷಣ, ತೆರಿಗೆ ಸುಧಾರಣಾ ಆಯೋಗ, ಲೋಕಸಭಾ ಚುನಾವಣೆ, ನಾನೇಕೆ ಕಾಂಗ್ರೆಸ್ ಪಕ್ಷ ಆರಿಸಿಕೊಂಡೆ, ದೇವರಾಜ ಅರಸುರವರ ಎಚ್ಚರಿಕೆ- ಸೋಲಿಲ್ಲದ ಸರದಾರ, ಭೂ ಸುಧಾರಣೆ-ಕ್ರಾಂತಿಪಥ, ಮಾತು ಬಿಟ್ಟ ಇಂದಿರಾಗಾಂಧಿ, ಕೇರಳ ರಾಜ್ಯದ ರಾಜಕೀಯ ಸ್ಥಿತ್ಯಂತರ, ರಾಜಕೀಯ ಕಂಪನ, ರಾಜಕೀಯ ಹಗ್ಗ ಜಗ್ಗಾಟ, ಆಡಳಿತದಲ್ಲಿ ಹೊಸ ಶಕೆ, ಶಿಕ್ಷಣ ಕ್ರಾಂತಿ, ಕನಸಿನ ಯೋಜನೆಗಳಿಗೆ ಮುಕ್ತಿ ಸೇರಿದಂತೆ ಸಾಕಷ್ಟು ವಿಚಾರಗಳನ್ನು ಈ ಕೃತಿಯಲ್ಲಿ ದಾಖಲಿಸಿದ್ದೇನೆ’ ಎಂದು ಅವರು ವಿವರಿಸಿದರು.

ADVERTISEMENT

‘ಒಂದು ಆತ್ಮಕಥನ ಬರೆಯಬೇಕು ಅಂದಾಗ ಸತ್ಯ ಇರಬೇಕು. ಆದರೆ, ಅದನ್ನು ಬರೆಯುವುದು ಬಹಳ ಕಷ್ಟ. ರಾಜಕಾರಣದಲ್ಲಿದ್ದಾಗ ಪೂರ್ಣ ಸತ್ಯಾಂಶ ಬರೆಯಲು ಸಾಧ್ಯವಾಗುವುದಿಲ್ಲ. ನಾನು ಅನುಮಾನದಿಂದಲೇ ಬರೆಯಲು ಆರಂಭಿಸಿದ್ದೆ. ತುಂಬಾ ಜನ ಬರೆಯಲು ಹೇಳಿದರು. ಕೆಲವರು ರಸವತ್ತಾಗಿ ಬರೆಯಿರಿ ಎಂದರು. ಆದರೆ, ಅದು ಸಾಧ್ಯವಿಲ್ಲ ಎಂದೆ. ನನಗೆ ದಿನಚರಿ ಬರೆಯುವ ಅಭ್ಯಾಸವಿಲ್ಲ‌. ನಕಾರಾತ್ಮಕ ಭಾವನೆಗಳನ್ನು ತುಂಬಿಸುವ ಪ್ರಯತ್ನ ಮಾಡಿಲ್ಲ. ನನಗೆ ಸ್ವಯಂ ಸಂವಾದ ಮಾಡಿಕೊಳ್ಳುವುದೆಂರೆ ಇಷ್ಟ. ನನಗೆ ನಾನೇ ಮಾತನಾಡಿಕೊಳ್ಳುವುದೆಂದರೆ ಇಷ್ಟ. ನಮ್ಮಲ್ಲಿ ಅಧ್ಬತ ವ್ಯಕ್ತಿಯೊಬ್ಬ ಒಳಗಿರುತ್ತಾನೆ. ಅದನ್ನು ಹೊರ ತರಬೇಕಾಗುತ್ತದೆ. ನಿಮ್ಮನ್ನು ದ್ವೇಷ ಮಾಡುವವರನ್ನು ದ್ವೇಷ ಮಾಡಬೇಡಿ. ಯಾಕೆಂದರೆ ಅವರೇ ನಿಮ್ಮ ನಿಜವಾದ ವಿಮರ್ಶಕರು’ ಎಂದು ವಿಶ್ಲೇಷಿಸಿದರು.

‘ಭ್ರಷ್ಟಾಚಾರದ ಮೂಲಕ ರಾಜಕೀಯ ನಡೆಸಬಾರದು. ಈ ಪುಸ್ತಕದಲ್ಲಿ ವಸ್ತುನಿಷ್ಠತೆಯನ್ನು ನೀವು ಕಾಣಬಹುದು. ಲಕೋಟೆ ಮುಖ್ಯಮಂತ್ರಿ ಅಂತ ಯಾಕೆ ಬಂತು. ಆ ವಿಚಾರವನ್ನು ಕೂಡಾ ಈ ಪುಸ್ತಕದಲ್ಲಿ ಬರೆದಿದ್ದೇನೆ. ಇದರಲ್ಲಿ ನನಗೆ ನಾಚಿಕೆಯೇನೂ ಇಲ್ಲ. ಲಕೋಟೆ ಹಿಂದೆ ಒಂದು ಸತ್ಯಾಂಶ ಇದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ‌ ಈ ಪುಸ್ತಕದಲ್ಲಿದೆ’ ಎಂದರು.

‘ಪವಾಡಗಳಿಗಾಗಿ ಕಾಯಬೇಡಿ. ನಿಮ್ಮ ಜೀವನವೇ ಒಂದು ಪವಾಡ. ಸಮಯವೇ ನನ್ನ ಪ್ರತಿಸ್ಪರ್ಧಿ. ಸಮಯವೇ ನನ್ನ ವೇಗ. ವಿಧಾನಸೌಧದಲ್ಲಿ ಆಗ ಲಿಫ್ಟ್‌ನಲ್ಲಿ ಹೋಗುತ್ತಿರಲಿಲ್ಲ. ಮೆಟ್ಟಿಲಗಳ ಮೂಲಕ ಓಡಿ ಹೋಗುತ್ತಿದೆ. ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಅಧಿಕಾರ ನಡೆಸಿದ್ದೇನೆ. ನಾಲ್ಕು ಕವನ ಸಂಕಲನಗಳನ್ನು ಬರೆದಿದ್ದೇನೆ. ಮೂರು ಕಾದಂಬರಿ, ಮೂರು ಮಹಾಕಾವ್ಯಗಳನ್ನು ಬರೆದಿದ್ದೇನೆ’ ಎಂದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.