ADVERTISEMENT

ಅನ್ಯಧರ್ಮದ ಯುವತಿಯರನ್ನು ಪ್ರೀತಿಸಿ ಮದುವೆಯಾಗಿ: ಚಕ್ರವರ್ತಿ ಸೂಲಿಬೆಲೆ

‘ಕೊರಗಜ್ಜನ ಆದಿಕ್ಷೇತ್ರಕ್ಕೆ ನಮ್ಮ ನಡೆ’ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2025, 23:40 IST
Last Updated 9 ಮಾರ್ಚ್ 2025, 23:40 IST
<div class="paragraphs"><p>ಚಕ್ರವರ್ತಿ ಸೂಲಿಬೆಲೆ&nbsp;</p></div>

ಚಕ್ರವರ್ತಿ ಸೂಲಿಬೆಲೆ 

   

ಉಳ್ಳಾಲ (ದಕ್ಷಿಣ ಕನ್ನಡ): ‘ಮದುವೆಯಾಗಲು ಹುಡುಗಿ ಸಿಗದ ಹಿಂದೂ ಹುಡುಗರು ಅನ್ಯಧರ್ಮೀಯ ಯುವತಿಯರನ್ನು ಪ್ರೀತಿಸಿ ವಿವಾಹವಾಗಿ’ ಎಂದು ಚಕ್ರವರ್ತಿ ಸೂಲಿಬೆಲೆ ಸಲಹೆ ನೀಡಿದರು.

ವಿಶ್ವ ಹಿಂದೂ ಪರಿಷತ್ ವತಿಯಿಂದ ಭಾನುವಾರ ಮಂಗಳೂರಿನ ಕದ್ರಿ ಮಂಜುನಾಥ ಕ್ಷೇತ್ರದಿಂದ ಕುತ್ತಾರಿನ ಕೊರಗಜ್ಜನ ಆದಿಕ್ಷೇತ್ರಕ್ಕೆ ನಡೆದ ‘ಕೊರಗಜ್ಜನ ಆದಿಕ್ಷೇತ್ರಕ್ಕೆ ನಮ್ಮ ನಡೆ’ ಪಾದಯಾತ್ರೆಯ ಸಮಾರೋಪದಲ್ಲಿ ಅವರು ಮಾತನಾಡಿದರು.

ADVERTISEMENT

‘ಮತಾಂತರ, ಲವ್ ಜಿಹಾದ್ ವಿಚಾರಗಳನ್ನು ಬಿಟ್ಟು ಬಿಡಿ. ಹಿಂದೂಧರ್ಮದಿಂದ ಮತಾಂತರವಾದವರನ್ನ ಮತ್ತೆ ‘ಘರ್ ವಾಪಸಿ’ ಮಾಡುವುದು ಹೇಗೆಂದು ನಮ್ಮ ಯುವಕರನ್ನ ತರಬೇತುಗೊಳಿಸಿ. ಈಗ ಟೆಸ್ಟ್ ಮ್ಯಾಚ್‌ಗಳು ನಿಂತು ಹೋಗಿವೆ. ಇರುವ ಇಪ್ಪತ್ತು ಓವರ್‌ಗಳಲ್ಲೇ ಬಡಿಯಬೇಕು. ಈ ಸವಾಲುಗಳನ್ನ ಎದುರಿಸಲು ಸಜ್ಜಾಗಬೇಕು’ ಎಂದರು.

‘ಹಿಂದುತ್ವವನ್ನು ಗೌರವಿಸುವ ಜನಪ್ರತಿನಿಧಿಗಳು ನಾಡನ್ನು ಆಳಿದಾಗ ಹಿಂದೂ ಧರ್ಮ ಉಳಿಯಲು ಸಾಧ್ಯ. ವಕ್ಫ್‌ ವಿರುದ್ಧ ದೇಶದೆಲ್ಲೆಡೆ ಹೋರಾಟ ನಡೆಯುತ್ತಿರುವಾಗ ರಾಜ್ಯ ಸರ್ಕಾರ, ವಕ್ಫ್ ಆಸ್ತಿಯ ನವೀಕರಣಕ್ಕೆ ₹150 ಕೊಟಿ ನೀಡಲು ಹೊರಟಿದೆ. ಪ್ರಚೋದನೆ ನೀಡಿ ಪ್ರತ್ಯೇಕತೆಯನ್ನು ಹುಟ್ಟುಹಾಕುವ ಪ್ರಯತ್ನಕ್ಕೆ ಮುಂದಾಗಿದೆ’ ಎಂದರು.

ವಿಶ್ವ ಹಿಂದೂ ಪರಿಷತ್‌ ದಕ್ಷಿಣ ಪ್ರಾಂತ ಸಹಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌, ‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂಗಳ ಪ್ರಮಾಣ ಶೇ 65ಕ್ಕೆ ತಲುಪಿದೆ. ಹಿಂದೂ ಯುವಕ, ಯುವತಿಯರು 25ರಿಂದ 30 ವರ್ಷ ವಯಸ್ಸಿನೊಳಗೆ ಮದುವೆಯಾಗಿ ಕನಿಷ್ಠ ಎರಡು ಮಕ್ಕಳು ಪಡೆಯುವಂತೆ ಜಾಗೃತಿ ಮೂಡಿಸಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.