ADVERTISEMENT

ಜೀವನ ಸಾರ್ಥಕ್ಯಕ್ಕೆ ಶಂಕರರ ತತ್ವ ಮಾರ್ಗವನ್ನು ತೋರಿಸುತ್ತವೆ: ವಿಧುಶೇಖರ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 31 ಜನವರಿ 2026, 15:16 IST
Last Updated 31 ಜನವರಿ 2026, 15:16 IST
<div class="paragraphs"><p>ವೇದಾಂತ ಭಾರತಿ ಆಯೋಜಿಸಿದ್ದ ವಿವೇಕದೀಪ್ತಿ ಸಮ್ಮೇಳನದಲ್ಲಿ&nbsp;ಕೃಷ್ಣರಾಜನಗರ ಯಡತೊರೆ ಯೋಗಾನಂದೇಶ್ವರ ಸರಸ್ವತೀ ಮಠದ ಶಂಕರ ಭಾರತೀ ಸ್ವಾಮೀಜಿ ಮತ್ತು ಬ್ರಹ್ಮಾನಂದ ಭಾರತೀ ಸ್ವಾಮೀಜಿ ಹಾಗೂ ಶೃಂಗೇರಿ ಶಾರದಾ ಪೀಠದ ವಿಧುಶೇಖರ ಭಾರತೀ ಸ್ವಾಮೀಜಿ ಭಾಗವಹಿಸಿದ್ದರು</p></div>

ವೇದಾಂತ ಭಾರತಿ ಆಯೋಜಿಸಿದ್ದ ವಿವೇಕದೀಪ್ತಿ ಸಮ್ಮೇಳನದಲ್ಲಿ ಕೃಷ್ಣರಾಜನಗರ ಯಡತೊರೆ ಯೋಗಾನಂದೇಶ್ವರ ಸರಸ್ವತೀ ಮಠದ ಶಂಕರ ಭಾರತೀ ಸ್ವಾಮೀಜಿ ಮತ್ತು ಬ್ರಹ್ಮಾನಂದ ಭಾರತೀ ಸ್ವಾಮೀಜಿ ಹಾಗೂ ಶೃಂಗೇರಿ ಶಾರದಾ ಪೀಠದ ವಿಧುಶೇಖರ ಭಾರತೀ ಸ್ವಾಮೀಜಿ ಭಾಗವಹಿಸಿದ್ದರು

   

– ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಇಂದ್ರಿಯಗಳನ್ನು ನಮ್ಮ ವಶದಲ್ಲಿ ಇರಿಸಿಕೊಳ್ಳಲು ಸಾಧ್ಯವಾಗಿಸುವ ಜ್ಞಾನವೇ ನಿಜವಾದ ಜ್ಞಾನ. ಅಂತಹ ಜ್ಞಾನವನ್ನು ಪಡೆದುಕೊಳ್ಳುವುದೇ ನಮ್ಮ ಜೀವನದ ಮಾರ್ಗವಾಗಬೇಕು. ಶಂಕರರ ತತ್ವಗಳು ಆ ಮಾರ್ಗವನ್ನು ತೋರಿಸುತ್ತವೆ’ ಎಂದು ಶೃಂಗೇರಿ ಶಾರದಾ ಪೀಠದ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.

ADVERTISEMENT

ವೇದಾಂತ ಭಾರತೀ ನಗರದಲ್ಲಿ ಆಯೋಜಿಸಿರುವ ‘ವಿವೇಕ ದೀಪ್ತಿ’ ಸಮಾವೇಶದ ಭಾಗವಾಗಿ ಶನಿವಾರ, ಶಂಕರಭಗವತ್ಪಾದರು ರಚಿಸಿದ್ದ ದಕ್ಷಿಣಾಮೂರ್ತಿ ಅಷ್ಟಕದ ಸಮರ್ಪಣೆ ಕಾರ್ಯಕ್ರಮದ ನಂತರ ಅವರು ಮಾತನಾಡಿದರು. 

‘ಜನನ–ಮರಣದ ನಡುವಿರುವುದೇ ಜೀವನ. ಅದನ್ನು ಮೀರಿ ಜೀವನವನ್ನು ಸಾರ್ಥಕಗೊಳಿಸಬೇಕು. ಜ್ಞಾನ, ಭಕ್ತಿ ಮತ್ತು ವೈರಾಗ್ಯದ ಮೂಲಕ ಆತ್ಮ ಸಾಕ್ಷಾತ್ಕಾರ ಮತ್ತು ಮೋಕ್ಷವನ್ನು ಸಾಧಿಸಬೇಕು. ಲೌಖಿಕ ಜೀವನದ ಒಳಹೊರಗನ್ನು ತಿಳಿದಷ್ಟೂ ಅವೆಲ್ಲ, ಕೇವಲ ಜೀವನ ನಡೆಸುವ ಸಾಧನಗಳು ಎಂಬ ಅರಿವು ನಮಗಾಗುತ್ತದೆ. ಅದನ್ನು ಅರ್ಥ ಮಾಡಿಸುವ ಸಾಧನವೇ ಶಂಕರರ ತತ್ವ. ಈ ಹೊತ್ತಿನಲ್ಲಿ ಶಂಕರರ ತತ್ವ ಮತ್ತು ಉಪದೇಶಗಳು ಹಿಂದೆಂದಿಗಿಂತ ಹೆಚ್ಚು ಅಗತ್ಯ. ಅವುಗಳನ್ನು ಪ್ರತಿದಿನ ಮನನ ಮಾಡಿಕೊಳ್ಳಬೇಕು’ ಎಂದರು.

‘ಭಾರತವು ವಿಶ್ವಗುರುವಾಗಲು ಶಂಕರರ ತತ್ವಗಳನ್ನು ಅನುಸರಿಸಬೇಕು. ಆಧುನಿಕ ವಿಜ್ಞಾನ ಮತ್ತು ಸನಾತನ ಧರ್ಮದ್ದು ಬೇರ್ಪಡಿಸಲಾಗದ ಸಂಬಂಧ. ಹೀಗಾಗಿಯೇ ಹಲವು ಯತ್ನಗಳ ನಂತರವೂ ಧರ್ಮವು ನಾಶವಾಗದೇ ಉಳಿದಿದೆ. ವೇದಾಂತ ಭಾರತೀ ಸಹಯೋಗದಲ್ಲಿ ಶೃಂಗೇರಿ ಮಠವು ಧಾರ್ಮಿಕ ಜಾಗೃತಿ ಬಿತ್ತುವ ಕೆಲಸವನ್ನು ಮಾಡುತ್ತಿದೆ. ಅದು ಮುಂದುವರೆಯಬೇಕು’ ಎಂದರು.

ಯಡತೊರೆ ಯೋಗಾನಂದೇಶ್ವರ ಸರಸ್ವತೀ ಮಠದ ಬ್ರಹ್ಮಾನಂದ ಭಾರತೀ ಸ್ವಾಮೀಜಿ, ವೇದಾಂತ ಭಾರತೀ ಟ್ರಸ್ಟಿ ಮತ್ತು ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಎಸ್‌.ಎಸ್‌.ನಾಗಾನಂದ, ಹಿರಿಯ ವಕೀಲ ಅಶೋಕ ಹಾರನಹಳ್ಳಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ದಕ್ಷಿಣಾಮೂರ್ತಿ ಅಷ್ಟಕ ಮತ್ತು ವಿಜ್ಞಾನದ ತತ್ವಗಳನ್ನು ಸಂಯೋಜಿಸಿದ ಪರಿಕಲ್ಪನೆಗಳ ವಸ್ತು ಪ್ರದರ್ಶನವನ್ನು ಸಮ್ಮೇಳನದ ಭಾಗವಾಗಿ ಆಯೋಜಿಸಲಾಗಿದೆ. ವಿವೇಕ ದೀಪ್ತಿಯಲ್ಲಿ ನಗರದ 350ಕ್ಕೂ ಹೆಚ್ಚು ಶಾಲೆಗಳ ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ. 

ವೇದಾಂತ ಭಾರತಿ ಆಯೋಜಿಸಿದ್ದ ವಿವೇಕದೀಪ್ತಿ ಸಮ್ಮೇಳನದಲ್ಲಿ ಶಾಲಾ ವಿದ್ಯಾರ್ಥಿಗಳು ಶಂಕರಭಗವತ್ಪಾದರು ರಚಿಸಿದ್ದ ‘ದಕ್ಷಿಣಾಮೂರ್ತಿ ಅಷ್ಟಕ’ ಪಠಿಸಿದರು –ಪ್ರಜಾವಾಣಿ ಚಿತ್ರ
ದಕ್ಷಿಣಾಮೂರ್ತಿ ಅಷ್ಟಕವನ್ನು ವಿಜ್ಞಾನದ ಪರಿಕಲ್ಪನೆಗೆ ಅಳವಡಿಸುವ ಯತ್ನ ಮಾಡಲಾಗಿದೆ. ಈ ಮೂಲಕ ದಕ್ಷಿಣಾಮೂರ್ತಿ ಅಷ್ಟಕ ಮತ್ತು ವಿಜ್ಞಾನದ ತತ್ವಗಳನ್ನು ಜನರಿಗೆ ಒಟ್ಟಿಗೇ ತಲುಪಿಸಲಾಗುವುದು 
ಶಂಕರ ಭಾರತೀ ಸ್ವಾಮೀಜಿ ಯೋಗಾನಂದೇಶ್ವರ ಸರಸ್ವತೀ ಮಠ ಯಡತೊರೆ  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.