ಕಾರವಾರ: ‘ದಿ ವಿಲನ್’ ಚಿತ್ರದ ಯಶಸ್ಸಿಗಾಗಿ ಕೋಣ ಹಾಗೂ ಕುರಿಯನ್ನು ಬಲಿ ನೀಡಿರುವ ಅಭಿಮಾನಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಭಾನುವಾರ ಇಲ್ಲಿನ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
‘ಅಭಿಮಾನಿಗಳು ಕುರಿ ಹಾಗೂ ಕೋಣ ಬಲಿ ನೀಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಗಳಲ್ಲಿ ಹರಿದಾಡುತ್ತಿವೆ. ಪ್ರಾಣಿಯನ್ನು ಹತ್ಯೆ ಮಾಡಿ ಚಲನಚಿತ್ರದ ಪೋಸ್ಟರ್‌ಗೆ ರಕ್ತದ ಅಭಿಷೇಕ ಮಾಡಿದ್ದಾರೆ. ಇದು ಹೇಯ ಕೃತ್ಯ. ಕೂಡಲೇ ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.