ADVERTISEMENT

ಸಮ್ಮಿಶ್ರ ಸರ್ಕಾರ ಪತನಕ್ಕೆ ಶ್ರೀನಿವಾಸಪ್ರಸಾದ್‌ ಮನೆಯಲ್ಲೇ ಮುಹೂರ್ತ: ವಿಶ್ವನಾಥ್

​ಪ್ರಜಾವಾಣಿ ವಾರ್ತೆ
Published 3 ಜೂನ್ 2021, 0:29 IST
Last Updated 3 ಜೂನ್ 2021, 0:29 IST
ಎಚ್‌.ವಿಶ್ವನಾಥ್
ಎಚ್‌.ವಿಶ್ವನಾಥ್   

ಮೈಸೂರು: ‘ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸುವುದಕ್ಕೆ, ಸಮ್ಮಿಶ್ರ ಸರ್ಕಾರ ಪತನಕ್ಕೆ ಹಾಗೂ ಯಡಿಯೂರಪ್ಪ ಅವರ ಪಟ್ಟಾಭಿಷೇಕಕ್ಕೆ ಸಂಸದ ವಿ. ಶ್ರೀನಿವಾಸಪ್ರಸಾದ್‌ ಮನೆಯಲ್ಲೇ ಮುಹೂರ್ತ ಇಟ್ಟಿದ್ದು’ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಬಹಿರಂಗಪಡಿಸಿದರು.

ಶ್ರೀನಿವಾಸ ಪ್ರಸಾದ್‌ ಮನೆಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘2018ರಿಂದ ಇದುವರೆಗೆ ಪ್ರಸಾದ್‌ ಮನೆಯಲ್ಲಿ ಹಲವು ರಾಜಕೀಯ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಪ್ರಸಾದ್‌ ಹಿರಿಯ ಮುತ್ಸದ್ದಿ. ನಾವೆಲ್ಲಾ ಒಟ್ಟಿಗೆ ಬೆಳೆದವರು’ ಎಂದರು.

ಮತ್ತೆ ಏನಾದರೂ ಮುಹೂರ್ತ ಇಡಲಾಗುತ್ತಿದೆಯೇ ಎಂಬ ಪ್ರಶ್ನೆಗೆ, ‘ಸ್ವಲ್ಪ ದಿನ ಕಾಯಿರಿ. ಪರಿಸ್ಥಿತಿ ಈಗ ಅಷ್ಟೊಂದು ಚೆನ್ನಾಗಿಲ್ಲ. ಯಡಿಯೂರಪ್ಪ ಬಗ್ಗೆ ನಮಗೆ ಗೌರವವಿದೆ. ಪಕ್ಷ ಕಟ್ಟಿದ ವ್ಯಕ್ತಿ. ಆದರೆ, ಈಗ ಅವರ ಆರೋಗ್ಯ ಸರಿ ಇಲ್ಲ. ನಮಗೆ ಅವರ ಆರೋಗ್ಯಕ್ಕಿಂತ ಹೆಚ್ಚಾಗಿ ರಾಜ್ಯದ ಆಡಳಿತದ ಆರೋಗ್ಯ ಬಹಳ ಮುಖ್ಯ’ ಎಂದು ಪ್ರತಿಕ್ರಿಯಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.