ADVERTISEMENT

ವಿಐಟಿಇಇಇ ಫಲಿತಾಂಶ ಪ್ರಕಟ

​ಪ್ರಜಾವಾಣಿ ವಾರ್ತೆ
Published 12 ಜೂನ್ 2021, 19:25 IST
Last Updated 12 ಜೂನ್ 2021, 19:25 IST

ಬೆಂಗಳೂರು: ವೆಲ್ಲೂರು ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಯ (ವಿಐಟಿಇಇಇ) ಫಲಿತಾಂಶ ಶನಿವಾರ ಪ್ರಕಟಗೊಂಡಿದೆ.

ಸಂಸ್ಥೆಯು ವಿವಿಧ ಬಿ.ಟೆಕ್‌ ಕೋರ್ಸ್‌ಗಳಿಗೆಮೇ 28ರಿಂದ ಜೂನ್ 10ರವರೆಗೆಆನ್‌ಲೈನ್‌ ಮೂಲಕ ಪ್ರವೇಶ ಪರೀಕ್ಷೆಗಳನ್ನು ನಡೆಸಿತ್ತು.ಪರೀಕ್ಷೆಯ ಫಲಿತಾಂಶವನ್ನುhttps://admissionresults.vit. ac.in/viteeeನಲ್ಲಿ ಪ್ರಕಟಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

1 ಲಕ್ಷದೊಳಗಿನ ರ್‍ಯಾಂಕ್ ಪಡೆದ ವಿದ್ಯಾರ್ಥಿಗಳು ಇದೇ ಜೂನ್ 21ರಿಂದ ಜುಲೈ 16ರವರೆಗೆ ನಾಲ್ಕು ಹಂತಗಳಲ್ಲಿ ನಡೆಯಲಿರುವ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಲು ಅರ್ಹತೆ ಪಡೆಯಲಿದ್ದಾರೆ. ನಂತರದರ್‍ಯಾಂಕ್‌ ಪಡೆದವರು ಆಂಧ್ರಪ್ರದೇಶ ಹಾಗೂ ಭೋಪಾಲ್‌ನಲ್ಲಿರುವ ಸಂಸ್ಥೆಗಳಲ್ಲಿ ಮಾತ್ರ ಪ್ರವೇಶಾತಿ ಪಡೆಯಲು ಅರ್ಹರು.

ADVERTISEMENT

ಕೇಂದ್ರ ಮತ್ತು ರಾಜ್ಯ ಮಂಡಳಿಗಳ ಪರೀಕ್ಷೆಗಳಲ್ಲಿ ಅಗ್ರಸ್ಥಾನ ಪಡೆದಿರುವವರಿಗೆ ಜಿ.ವಿ.ಸ್ಕೂಲ್ ಡೆವಲಪ್‌ಮೆಂಟ್ ಪ್ರೋಗ್ರಾಂ ಅಡಿ ನಾಲ್ಕು ವರ್ಷಗಳವರೆಗೆ ಶೇ 100ರಷ್ಟು ಶುಲ್ಕ ವಿನಾಯಿತಿ ನೀಡಲಾಗುವುದು. 50ನೇರ್‍ಯಾಂಕ್‌ವರೆಗೆ ಶೇ 75ರಷ್ಟು ಬೋಧನಾ ಶುಲ್ಕ ವಿನಾಯಿತಿ ಹಾಗೂ 100ನೇರ್‍ಯಾಂಕ್‌ವರೆಗೆ ಶೇ 50ರಷ್ಟುಬೋಧನಾ ಶುಲ್ಕ ವಿನಾಯಿತಿ ಇರಲಿದೆ.

ತಮಿಳುನಾಡು, ಆಂಧ್ರಪ್ರದೇಶ ಹಾಗೂ ಮಧ್ಯಪ್ರದೇಶಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದವರಿಗೆ ಜಿಲ್ಲಾವಾರು ತಲಾ ಒಬ್ಬ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಗೆ ‘ಗ್ರಾಮೀಣ ವಿದ್ಯಾರ್ಥಿಗಳ ಪ್ರಗತಿಬೆಂಬಲ’ ಯೋಜನೆಯಡಿ ಶೇ 100ರಷ್ಟು ಶು‌ಲ್ಕ ವಿನಾಯಿತಿ ಹಾಗೂ ಹಾಸ್ಟೆಲ್ ಶುಲ್ಕ ವಿನಾಯಿತಿಯೂ ಇರಲಿದೆ.ತರಗತಿಗಳು ಆಗಸ್ಟ್‌ 2ರಿಂದ ಪ್ರಾರಂಭಗೊಳ್ಳಲಿದೆ.

‘ಸಂಸ್ಥೆಯ ಬಿ.ಎಸ್‌ಸಿ (ಕೃಷಿ) ಸೇರಿದಂತೆ ವಿವಿಧ ಪದವಿಗಳು ಹಾಗೂ ವಿವಿಧಸಂಯೋಜಿತ ಕಾರ್ಯಕ್ರಮಗಳಿಗೆ ಪ್ರವೇಶ ಆರಂಭಗೊಂಡಿದ್ದು, ಹೆಚ್ಚಿನ ಮಾಹಿತಿಗೆ ಸಂಸ್ಥೆಯ ವೆಬ್‌ಸೈಟ್‌www.vit.ac.in ನೋಡಬಹುದು’ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.