ADVERTISEMENT

ವೋಟ್‌ ಮಾಡೋಣ ಬನ್ನಿ: ಯೋಚಿಸದೇ ವೋಟ್‌ ಹಾಕಬೇಡಿ - ಐಂದ್ರಿತಾ ರೈ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2019, 19:46 IST
Last Updated 18 ಮಾರ್ಚ್ 2019, 19:46 IST
ಐಂದ್ರಿತಾ
ಐಂದ್ರಿತಾ   

ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಮತದಾನದ ಪರಿಕಲ್ಪನೆಯೇ ಇರಲಿಲ್ಲ. ಸ್ವಾತಂತ್ರ್ಯ ಸಿಕ್ಕ ನಂತರಪ್ರತಿಯೊಬ್ಬರೂ ಮತದಾನ ಮಾಡುವ ಹಕ್ಕನ್ನು ಸಂವಿಧಾನ ಒದಗಿಸಿದೆ. ಸದ್ಯ, ನಾವೀಗ ಮಾಹಿತಿ ಯುಗದಲ್ಲಿದ್ದೇವೆ. ಬೆರಳಿನ ತುದಿಯಲ್ಲಿ ಎಲ್ಲ ಮಾಹಿತಿ ಲಭ್ಯವಿದ್ದರೂ ಚುನಾವಣೆಯಲ್ಲಿ ಯಾರು, ಎಲ್ಲಿಂದ ಸ್ಪರ್ಧಿಸುತ್ತಿದ್ದಾರೆ ಎಂಬ ಮಾಹಿತಿ, ಅರಿವು ಬಹುತೇಕರಿಗೆ ಇಲ್ಲ.

ಮತದಾನ ಪ್ರಕ್ರಿಯೆಯಲ್ಲಿ ಎಚ್ಚೆತ್ತುಕೊಳ್ಳದೇ, ಜಾಗೃತಿವಹಿಸದೇ, ರಾಜಕಾರಣಿಗಳ ಬಗ್ಗೆ ಪೂರ್ವಾಪರ ಯೋಚನೆ ಮಾಡದೇ ವೋಟ್‌ ಹಾಕಬಾರದು. ಚುನಾವಣೆಯಲ್ಲಿ ಸ್ಪರ್ಧಿಸಲು ನಿಂತ ವ್ಯಕ್ತಿಯ ಸಾಧನೆಗಳೇನು, ವೈಫಲ್ಯಗಳೇನು ಎಂಬುದರ ಬಗ್ಗೆ ಯೋಚಿಸಲೇಬೇಕು. ಜನರ ಸಮಸ್ಯೆಗಳನ್ನು ಪರಿಹರಿಸುವ, ದೇಶ ಮುನ್ನಡೆಸಿಕೊಂಡು ಹೋಗುವ ನಾಯಕನಿಗೆ ನಿಮ್ಮ ಮತ ಹಾಕಿ. ಭವಿಷ್ಯದ ಭಾರತ ನಿಮ್ಮ ಕೈಯಲ್ಲಿದೆ.

–ಐಂದ್ರಿತಾ ರೈ, ನಟಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.