ADVERTISEMENT

ಪರಿಷತ್‌ ನಾಲ್ಕು ಸ್ಥಾನಗಳಿಗೆ ಮತದಾನ ನಾಳೆ

ಚುನಾವಣಾ ಪ್ರಚಾರ ಅಂತ್ಯ; ನ. 2ಕ್ಕೆ ಮತ ಎಣಿಕೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2020, 19:28 IST
Last Updated 26 ಅಕ್ಟೋಬರ್ 2020, 19:28 IST

ಬೆಂಗಳೂರು: ಆಗ್ನೇಯ ಪದವೀಧರ, ಪಶ್ಚಿಮ ಪದವೀಧರ, ಈಶಾನ್ಯ ಶಿಕ್ಷಕರ ಮತ್ತು ಬೆಂಗಳೂರು ಶಿಕ್ಷಕರ ಕ್ಷೇತ್ರಗಳಿಂದ ವಿಧಾನ ಪರಿಷತ್‌ಗೆ ನಡೆಯಲಿರುವ ದ್ವೈವಾರ್ಷಿಕ ಚುನಾವಣೆಯ ಪ್ರಚಾರ ಸೋಮವಾರ (ಅ. 26) ಅಂತ್ಯಗೊಂಡಿದ್ದು, ಬುಧವಾರ (ಅ.28) ಮತದಾನ ನಡೆಯಲಿದೆ.

ಈ ಕ್ಷೇತ್ರಗಳಿಂದ ಆಯ್ಕೆಯಾಗಿದ್ದ ಸದಸ್ಯರ ಅವಧಿ ಜೂನ್ 30ಕ್ಕೆ ಅಂತ್ಯಗೊಂಡಿತ್ತು. ಕೋವಿಡ್ ಕಾರಣದಿಂದ ಚುನಾವಣೆ ಮುಂದೂಡಲಾಗಿತ್ತು. ಮತ ಎಣಿಕೆ ನ. 2ರಂದು ನಡೆಯಲಿದೆ.

ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ 74,268 (ಪುರುಷರು–47,584, ಮಹಿಳೆಯರು–26673, ಇತರ–11), ಆಗ್ನೇಯ ಪದವೀಧರ ಕ್ಷೇತ್ರದಲ್ಲಿ 1,09,127 (ಪುರುಷರು–68,411, ಮಹಿಳೆಯರು–40,712, ಇತರ–4), ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ 29,234 (ಪುರುಷರು–18,948, ಮಹಿಳೆಯರು–10,284, ಇತರ–2), ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 22,089 (ಪುರುಷರು–7,946, ಮಹಿಳೆಯರು–14,140, ಇತರ–3) ಮತದಾರರಿದ್ದಾರೆ.

ADVERTISEMENT

ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಆರ್.ಚೌಡಾರೆಡ್ಡಿ ತೂಪಲ್ಲಿ (ಜೆಡಿಎಸ್‌), ರಮೇಶ್ ಬಾಬು (ಕಾಂಗ್ರೆಸ್), ಚಿದಾನಂದ ಗೌಡ (ಬಿಜೆಪಿ) ಕಣದಲ್ಲಿದ್ದಾರೆ. ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಎಸ್.ವಿ.ಸಂಕನೂರ (ಬಿಜೆಪಿ) ಕುಬೇರಪ್ಪ (ಕಾಂಗ್ರೆಸ್), ಬಸವರಾಜ ಗುರಿಕಾರ (ಪಕ್ಷೇತರ) ನಡುವೆ ಸ್ಪರ್ಧೆ ಇದೆ. ‌ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಶರಣಪ್ಪ ಮಟ್ಟೂರ (ಕಾಂಗ್ರೆಸ್), ಶಶಿಲ್ ನಮೋಶಿ (ಬಿಜೆಪಿ), ತಿಮ್ಮಯ್ಯ ಪುರ್ಲೆ (ಜೆಡಿಎಸ್‌) ಕಣದಲ್ಲಿದ್ದರೆ, ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಬಿಜೆಪಿಯಿಂದ ಪುಟ್ಟಣ್ಣ, ಜೆಡಿಎಸ್‌ನಿಂದ ಎ.ಪಿ.ರಂಗನಾಥ್, ಕಾಂಗ್ರೆಸ್‌ನಿಂದ ಪ್ರವೀಣ್ ಪೀಟರ್ ಸ್ಪರ್ಧೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.