ADVERTISEMENT

ವಕ್ಫ್: ಉಪಲೋಕಾಯುಕ್ತ ವರದಿ ಮುಚ್ಚಿಟ್ಟ ಸರ್ಕಾರ; ಪಾಲ್‌ಗೆ ಸಂಸದ ಲಹರ್ ಸಿಂಗ್ ಪತ್ರ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2024, 15:55 IST
Last Updated 10 ಡಿಸೆಂಬರ್ 2024, 15:55 IST
<div class="paragraphs"><p>ಲಹರ್ ಸಿಂಗ್ ಸಿರೋಯಾ</p></div>

ಲಹರ್ ಸಿಂಗ್ ಸಿರೋಯಾ

   

(ಪ್ರಜಾವಾಣಿ ಚಿತ್ರ)

ನವದೆಹಲಿ: ’ಕರ್ನಾಟಕದಲ್ಲಿ ವಕ್ಫ್ ಆಸ್ತಿಗಳ ಅತಿಕ್ರಮಣಗಳ ಕುರಿತು ಉಪ-ಲೋಕಾಯುಕ್ತ ನ್ಯಾಯಮೂರ್ತಿ ಎನ್.ಆನಂದ್ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಮುಚ್ಚಿಟ್ಟಿದೆ’ ಎಂದು ಆರೋಪಿಸಿ ರಾಜ್ಯಸಭಾ ಸದಸ್ಯ ಲಹರ್ ಸಿಂಗ್ ಸಿರೋಯಾ ಅವರು ವಕ್ಫ್‌ (ತಿದ್ದುಪಡಿ) ಮಸೂದೆಗೆ ಸಂಬಂಧಿಸಿದಂತೆ ರಚನೆಯಾಗಿರುವ ಜಂಟಿ ಸದನ ಸಮಿತಿಯ ಅಧ್ಯಕ್ಷ ಜಗದಾಂಬಿಕ ಪಾಲ್ ಅವರಿಗೆ ಪತ್ರ ಬರೆದಿದ್ದಾರೆ. 

ADVERTISEMENT

‘ನ್ಯಾಯಮೂರ್ತಿ ಎನ್.ಆನಂದ್ ಅವರು ಮಾರ್ಚ್ 2016ರಲ್ಲಿ ಕರ್ನಾಟಕ ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಸಿದ್ದಾರೆ. ಈ ವರದಿಯು ಸರ್ಕಾರದ ದಾಖಲೆಗಳಲ್ಲಿಯೂ ಇಲ್ಲ, ಸಾರ್ವಜನಿಕ ವಲಯದಲ್ಲಿಯೂ ಇಲ್ಲ. ಇದನ್ನು ಉದ್ದೇಶಪೂರ್ವಕವಾಗಿ ಕಣ್ಮರೆಯಾಗುವಂತೆ ಮಾಡಲಾಗಿದೆ’ ಎಂದು ಅವರು ದೂರಿದ್ದಾರೆ. 

ವಕ್ಫ್ ಆಸ್ತಿಯನ್ನು ಲೂಟಿ ಮಾಡುತ್ತಿರುವ ಅಲ್ಪಸಂಖ್ಯಾತ ಸಮುದಾಯದ ಶ್ರೀಮಂತ ಮತ್ತು ಬಲಶಾಲಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ಕಾಂಗ್ರೆಸ್‌ ಸರ್ಕಾರ ಏಕೆ ಆಸಕ್ತಿ ತೋರುತ್ತಿಲ್ಲ? ಹೀಗಾಗಿ, ಜಂಟಿ ಸಮಿತಿಯು ಈ ವರದಿಯನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು’ ಎಂದು ಅವರು ಕೋರಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.