ADVERTISEMENT

ತಮ್ಮನ್ನು ಮಾರಾಟ ಮಾಡಿಕೊಂಡ ಶಾಸಕರಿಗೆ ಏನೆಂದು ಹೇಳುತ್ತೀರಿ? ಹರಿಪ್ರಸಾದ್ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2023, 12:37 IST
Last Updated 17 ಜನವರಿ 2023, 12:37 IST
ಬಿ.ಕೆ ಹರಿಪ್ರಸಾದ್‌
ಬಿ.ಕೆ ಹರಿಪ್ರಸಾದ್‌   

ಹೊಸಪೇಟೆ (ವಿಜಯನಗರ): ‘ತನ್ನ ಹೊಟ್ಟೆಪಾಡಿಗಾಗಿ ಮಹಿಳೆಯೊಬ್ಬಳು ತನ್ನ ಮೈಯ ಮಾರಾಟ ಮಾಡಿಕೊಂಡಾಗ ಆಕೆಯನ್ನು ವೇಶ್ಯೆ ಎಂದು ಕರೆಯುತ್ತೇವೆ. ತಮ್ಮನ್ನು ಮಾರಾಟ ಮಾಡಿಕೊಂಡಿರುವ ಶಾಸಕರಿಗೆ ಏನೆಂದು ಹೇಳುತ್ತೀರಿ?’ ಎಂದು ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್‌ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌‌‌ ಪ್ರಶ್ನಿಸಿದರು.

ಇಲ್ಲಿನ ಡಾ. ಪುನೀತ್‌ ರಾಜಕುಮಾರ್‌ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾಂಗ್ರೆಸ್‌ ‘ಪ್ರಜಾ ಧ್ವನಿ’ ಯಾತ್ರೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ರಾಜ್ಯದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾದಾಗ ಸಮ್ಮಿಶ್ರ ಸರ್ಕಾರ ರಚಿಸಲಾಗಿತ್ತು. ಆದರೆ, ಕೆಲವು ಶಾಸಕರು ತಮ್ಮನ್ನು ಮಾರಾಟ ಮಾಡಿಕೊಂಡರು. ಎಲ್ಲವನ್ನೂ ಮಾರಾಟ ಮಾಡುವ ಶಾಸಕರಿಗೆ ಏನೆಂದು ಕರೆಯುತ್ತೀರಿ. ಸ್ಥಳೀಯ ಶಾಸಕರಿಗೆ ಬುದ್ಧಿ ಕಲಿಸಬೇಕಿದೆ. ತಮ್ಮ ಸ್ವಾಭಿಮಾನ ಮಾರಾಟ ಮಾಡಿರುವ ಶಾಸಕನಿಗೆ ಬರುವ ಚುನಾವಣೆಯಲ್ಲಿ ಬುದ್ಧಿ ಕಲಿಸಬೇಕು ಎಂದು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಅವರು ಹೆಸರು ಪ್ರಸ್ತಾಪಿಸದೆ ಹೇಳಿದರು.

ಈ ಭಾಗದ ಸಕ್ಕರೆ ಕಾರ್ಖಾನೆ ಮುಚ್ಚಿದೆ. ಅದಕ್ಕೆ ಕಾರಣ ಯಾರು? ಎಣ್ಣೆ, ಟೈಕ್ಸಟೈಲ್ಸ್‌, ಬಿಸ್ಕತ್‌ ಕಾರ್ಖಾನೆ ಮುಚ್ಚಿದ್ದರಿಂದ ನಿರುದ್ಯೋಗ ಹೆಚ್ಚಾಗಿದೆ. ಅದರ ಕೀರ್ತಿ ಬಿಜೆಪಿ ಸರ್ಕಾರಕ್ಕೆ ಸಲ್ಲುತ್ತದೆ ಎಂದು ವಾಗ್ದಾಳಿ ನಡೆಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.