ADVERTISEMENT

ಪ್ರಭಾಕರ ಭಟ್ ಯಾರೊ ಗೊತ್ತಿಲ್ಲ: ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 13 ಜನವರಿ 2020, 20:00 IST
Last Updated 13 ಜನವರಿ 2020, 20:00 IST
ಡಿ.ಕೆ.ಶಿವಕುಮಾರ್
ಡಿ.ಕೆ.ಶಿವಕುಮಾರ್   

ಬೆಂಗಳೂರು: ‘ಕಲ್ಲಡ್ಕ ಪ್ರಭಾಕರ ಭಟ್ ಯಾರು ಎಂಬುದೇ ನನಗೆ ಗೊತ್ತಿಲ್ಲ. ಬಿಜೆಪಿಯವರ ಬಳಿ ಅಧಿಕಾರ ಇದೆ. ಏನು ಬೇಕಾದರೂ ಮಾಡಿಕೊಳ್ಳಲಿ’ ಎಂದು ಶಾಸಕ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.

ಕಪಾಲ ಬೆಟ್ಟದಲ್ಲಿ ಯೇಸು ಪ್ರತಿಮೆ ನಿರ್ಮಾಣ ವಿರೋಧಿಸಿ ಆರ್‌ಎಸ್‌ಎಸ್, ಬಿಜೆಪಿ, ಇತರ ಸಂಘಟನೆಗಳು ಕನಕಪುರ ಚಲೋ ಆಯೋಜಿಸಿದ್ದ ಬಗ್ಗೆ ವರದಿಗಾರರೊಂದಿಗೆ ಸೋಮವಾರ ಮಾತನಾಡಿದರು.

‘ಯಾರು ಬೇಕಾದರೂ ಕನಕಪುರಕ್ಕೆ ಬರಲಿ. ಏನೇ ಮಾತನಾಡಿದರೂ, ಎಷ್ಟೇ ಬೈದರೂ ಸುಮ್ಮನಿರಬೇಕು. ಗಲಾಟೆ ಮಾಡುವುದು ಬೇಡ ಎಂದುಕಾರ್ಯಕರ್ತರಿಗೆ ಹೇಳಿದ್ದೇನೆ. ಬೆಂಗಳೂರನ್ನು ಇಡೀ ವಿಶ್ವವೇ ನೋಡುತ್ತಿದ್ದು, ಅಮೆರಿಕ, ಆಸ್ಟ್ರೇಲಿಯಾದಿಂದ ಫೋನ್‌ ಮಾಡಿ ಇಲ್ಲಿ ಏನಾಗುತ್ತಿದೆ ಎಂದು ಕೇಳುವಂತಹ ಸ್ಥಿತಿ ನಿರ್ಮಾಣವಾಗಿದೆ’ ಎಂದರು.

ADVERTISEMENT

‘ಮಾಗಡಿ ರಸ್ತೆಯಲ್ಲಿ ಕೆಂಪೇಗೌಡ ಪ್ರಾಧಿಕಾರಕ್ಕೆ ಕ್ರಿಶ್ಚಿಯನ್ನರು 5 ಎಕರೆ ಜಾಗ ಬಿಟ್ಟುಕೊಟ್ಟಿದ್ದಾರೆ.ಶಾಸಕ ಕೆ.ಜೆ.ಜಾರ್ಜ್, ಆರ್ಚ್ ಬಿಷಪ್ ಅವರಿಗೆ ಮನವಿ ಮಾಡಿದಾಗ ಸ್ಪಂದಿಸಿ ಜಾಗ ಕೊಡಿಸಿದರು. ಕನಕಪುರ ಕ್ಷೇತ್ರದಲ್ಲಿ ಶಾಲೆಗಾಗಿ ಸರ್ಕಾರ ಜಾಗ ಕೇಳಿತು, ಜಾಗ ಕೊಟ್ಟಿದ್ದೇನೆ. ಆ ಶಾಲೆಗಳಲ್ಲಿ ಎಲ್ಲಾ ಸಮುದಾಯದ ಮಕ್ಕಳು ಓದುತ್ತಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.