ADVERTISEMENT

ನಕಲಿ ಆಡಿಯೊ ಕೇಳಿಸಿ ಕಥೆ ಹೇಳ್ತಿದ್ದೀರಿ: ಸಿಎಂಗೆ ಯಡಿಯೂರಪ್ಪ ತಿರುಗೇಟು

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2019, 6:59 IST
Last Updated 8 ಫೆಬ್ರುವರಿ 2019, 6:59 IST
   

ಬೆಂಗಳೂರು: ‘ಸಿನಿಮಾ ನಿರ್ಮಾಪಕರಾಗಿರುವ ಕುಮಾರಸ್ವಾಮಿ ನಕಲಿ ಆಡಿಯೊ ಸೃಷ್ಟಿಸಿದ್ದಾರೆ. ಸಿಎಂ ಬಿಡುಗಡೆ ಮಾಡಿರುವುದು ನಕಲಿ ಆಡಿಯೊ. ಅವರ ಆರೋಪ ಆಧಾರವಿಲ್ಲದ್ದು’ ಎಂದು ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ಹೇಳಿದರು.

‘ನಾನು ಸ್ಪೀಕರ್‌ ಬಗ್ಗೆ ಮಾತನಾಡಿರುವುದು ನಿಜವಾದರೆ, ಕುಮಾರಸ್ವಾಮಿ ಆರೋಪ ಸಾಬೀತಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ರಾಜಕೀಯ ನಿವೃತ್ತಿ ಘೋಷಿಸುತ್ತೇನೆ’ ಎಂದು ಆತ್ಮವಿಶ್ವಾಸ ಪ್ರದರ್ಶಿಸಿದರು.

‘ಈ ಕುಮಾರಸ್ವಾಮಿಸಿನಿಮಾದ ವ್ಯಕ್ತಿ‌. ಏನುಬೇಕಾದರೂ ಸೃಷ್ಟಿ ಮಾಡಬಲ್ಲರು. ಇದು ನಕಲಿ ಆಡಿಯೊ. ಸರ್ಕಾರ ರಚಿಸುವ ಆಸೆಯಿಂದನಾನು ಯಾರನ್ನೂ ಬೇಟಿ ಮಾಡಿಲ್ಲ. 2011ರ ಘಟನೆಯನ್ನು ಕುಮಾರಸ್ವಾಮಿ ಮರೆತರಾ. ಅವರೇನು ಸತ್ಯ ಹರಿಶ್ಚಂದ್ರರಾ? ಎಂದು ಬಿಎಸ್‌ವೈ ಪ್ರಶ್ನಿಸಿದರು.

ADVERTISEMENT

‘ಶರಣಗೌಡ ನಮ್ಮೊಡನೆ ಮಾತನಾಡಿದ್ದಾರೆ ಎಂಬ ಕಥೆ ಕಟ್ಟಿ ಗೊಂದಲ ಸೃಷ್ಟಿಸುವುದು ಕುಮಾರಸ್ವಾಮಿ ಉದ್ದೇಶ.ಸಮ್ಮಿಶ್ರ ಸರ್ಕಾರದ ಶಾಸಕರಿಗೇ ಸರ್ಕಾರದ ಬಗ್ಗೆ ನಂಬಿಕೆ ಇಲ್ಲ. ಎಲ್ಲ ಇಲಾಖೆಗಳಲ್ಲೂ ಶಾಸಕರ ಬದಲು ಗುತ್ತಿಗೆದಾರರೇ ಆಡಳಿತ ನಡೆಸುತ್ತಿದ್ದಾರೆ. ಇವತ್ತು ಕಡಿಮೆ ಎಂದರೂ 11 ಶಾಸಕರುವಿಧಾನಸಭೆಗೆ ಆಗಮಿಸುವುದಿಲ್ಲ. ಮುಂದೇನಾಗುತ್ತದೆ ಎಂಬುದನ್ನು ಇನ್ನು ಕೆಲವು ದಿನಗಳವರೆಗೆ ಕಾದು ನೋಡಿ’ ಎಂದು ಅವರು ಸವಾಲು ಹಾಕಿದರು.

‘ಸಾಲಮನ್ನಾ ಆಸೆ ತೋರಿಸಿ ರೈತರ ಕಣ್ಣಿಗೆ ಮಣ್ಣೆರಚಿದ್ದೀರಿ, ಒಂದೇ ಕಂತಿನಲ್ಲಿ 48 ಸಾವಿರ ಕೋಟಿ ನೀಡುತ್ತೇನೆ ಎಂದಿದ್ದರಿ ಅದಕ್ಕೆ ಉತ್ತರ ನೀಡಿ. ರಾಜ್ಯದ150ಕ್ಕೂ ಹೆಚ್ಚು ತಾಲ್ಲೂಕುಗಳಲ್ಲಿ ಬರ ಇದೆ. ಸರ್ಕಾರಕ್ಕೆ ಮಾನ ಮರ್ಯಾದೆ ಇದ್ರೆ ರಾಜೀನಾಮೆ ಕೊಟ್ಟು ಮೊನೆಗೆ ಹೋಗಲಿ.ತರಾತುರಿಯಲ್ಲಿ ಬಜೆಟ್‌ ಅಧಿವೇಶನ ಮುಗಿಸದೆ ಇನ್ನೂ ಮೂರು ದಿನ ಅವಕಾಶ ನೀಡಲಿ.ಇಂದು ಮಂಡನೆಯಾಗಲಿರುವ ಬಜೆಟ್‌ ರಾಜ್ಯದ ಆರೂವರೆ ಕೋಟಿ ಜನರಿಗೆ ಸಂಬಂಧಿಸಿದ್ದು. ಕಳೆದ ಒಂಭತ್ತು ತಿಂಗಳಲ್ಲಿ ನಿಮ್ಮ ಸರ್ಕಾರದ ಸಾಧನೆ ಏನು?’ ಎಂದು ಪ್ರಶ್ನಿಸಿದರು.

ಮಾಧ್ಯಮ ಪ್ರತಿನಿಧಿಗಳೊಡನೆ ಮಾತನಾಡಿದ ಬಿಜೆಪಿ ಶಾಸಕ ಸುಭಾಷ್ ಗುತ್ತೇದಾರ್‘ಪಕ್ಷಕ್ಕೆ ಬರುವುದಾದರೆ ಮಂತ್ರಿ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಹೇಳಿದ್ದರು’ ಎಂದು ಶಾಸಕ ಸುಭಾಷ್ ಗುತ್ತೇದಾರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.