
ಮೈಸೂರು: ಅರಣ್ಯದಲ್ಲಿ ಜನರ ಓಡಾಟ ಹೆಚ್ಚಿದೆ, ರೆಸಾರ್ಟ್‌ಗಳಾಗಿವೆ. ಸಫಾರಿ ಜಾಸ್ತಿ ಆಗುತ್ತಿದೆ. ಕಾಡೊಳಗೆ ನೀರು, ಮೇವು ಇಲ್ಲದಿರುವುದು, ಚಿರತೆಗಳ ಹಾವಳಿ ಮೊದಲಾದ ಕಾರಣದಿಂದ ಕಾಡುಪ್ರಾಣಿಗಳು ಹೊರಗೆ ಬರುತ್ತಿವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿ ತಿಳಿಸಿದರು.
ಸುದ್ದಿಗಾರರ ಜೊತೆಗೆ ಮಾತನಾಡಿದ ವರು, ಸರಗೂರು ತಾಲ್ಲೂಕಿನಲ್ಲಿ ಹುಲಿ ದಾಳಿಯಿಂದ ಇಬ್ಬರು ರೈತರು ಮೃತರಾಗಿರುವ ಕುರಿತ ಪ್ರಶ್ನೆಗೆ ‘ನಿಜ ಹೇಳ್ಲಾ?’ ಎಂದು ಹೀಗೆ ಪ್ರತಿಕ್ರಿಯೆ ನೀಡಿದರು.
‘ವನ್ಯಜೀವಿ ಮಾನವ ಸಂಘರ್ಷ ತಡೆ ಸಂಬಂಧ ಸಚಿವರಾದ ಈಶ್ವರ ಖಂಡ್ರೆ, ಡಾ.ಎಚ್.ಸಿ. ಮಹದೇವಪ್ಪ, ಕೆ.ವೆಂಕಟೇಶ್ ಚಾಮರಾಜನಗರದಲ್ಲಿ ಸಭೆ ನಡೆಸಿದ್ದಾರೆ. ಶೀಘ್ರದಲ್ಲೇ ನಾನೂ ಸಭೆ ನಡೆಸಲಿದ್ದೇನೆ’ ಎಂದು ಅವರು ಹೇಳಿದರು.
‘ಅಕ್ರಮ ರೆಸಾರ್ಟ್‌ಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ರೆಸಾರ್ಟ್‌ಗಳು ಜಾಸ್ತಿ ಆಗಿದ್ದರಿಂದಲೇ ಕಾಡುಪ್ರಾಣಿಗಳು ನಾಡಿಗೆ ಬರುತ್ತಿವೆ ಎಂಬುದೂ ಒಂದು ಕಾರಣವಷ್ಟೇ ಹೊರತು, ಅದೇ ಮುಖ್ಯ ಕಾರಣವಲ್ಲ. ಸಫಾರಿ ಟ್ರಿಪ್ ಕಡಿಮೆ ಮಾಡುವಂತೆಯೂ ಸೂಚಿಸಿದ್ದೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.